ADVERTISEMENT

ದೀಪಾವಳಿ ಇಸ್ಪೀಟ್‌: 1136 ಮಂದಿ ಮೇಲೆ ಕೇಸು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 5:53 IST
Last Updated 24 ಅಕ್ಟೋಬರ್ 2025, 5:53 IST
<div class="paragraphs"><p>ಎಫ್‌ಐಆರ್</p></div>

ಎಫ್‌ಐಆರ್

   

ಬಳ್ಳಾರಿ: ಜಿಲ್ಲೆಯಲ್ಲಿ ದೀಪಾವಳಿ ಹಬ್ಬದ ದಿನಗಳಲ್ಲಿ ಆಯೋಜನೆಗೊಳ್ಳುವ ಜೂಜು ಅಡ್ಡೆಗಳ ಮೇಲೆ ಜಿಲ್ಲಾ ಪೊಲೀಸರು ದಾಳಿ ಸಂಘಟಿಸಿದ್ದು, 178 ಪ್ರಕರಣಗಳು ದಾಖಲಾಗಿವೆ. 

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ, ‘ಅ. 20ರಿಂದ 22ರ ವರೆಗೆ ಮೂರು ದಿನ ನಡೆದ ಈ ದಾಳಿಯಲ್ಲಿ ಒಟ್ಟು 1136 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ₹17,31,140 ದಂಡ ವಿಧಿಸಲಾಗಿದೆ’ ಎಂದು ತಿಳಿಸಿದ್ದಾರೆ. 

ADVERTISEMENT

ಜಿಲ್ಲೆಯಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹೊಟೇಲ್‌, ಲಾಡ್ಜ್‌, ಕಚೇರಿಗಳು, ಹೊಲ, ತೋಟ, ತೋಟದ ಮನೆಗಳು ಸೇರಿದಂತೆ ಹಲವು ಕಡೆ ವ್ಯಾಪಕವಾಗಿ ಇಸ್ಪೀಟ್‌ ಆಡಲಾಗುತ್ತದೆ.  ಈ ಕುರಿತ ದೂರುಗಳು, ಖಚಿತ ಮಾಹಿತಿ ಆಧರಿಸಿ ಪೊಲೀಸ್‌ ಇಲಾಖೆ ಈ ದಾಳಿ ನಡೆಸಿದೆ. 

ಕಳೆದ ವರ್ಷವೂ 137 ಪ್ರಕರಣಗಳಲ್ಲಿ, 833 ಮಂದಿಯ ವಿರುದ್ಧ ಕೇಸು ಹಾಕಲಾಗಿತ್ತು.  16,44,665 ಹಣ ವಶಕ್ಕೆ ಪಡೆಯಲಾಗಿತ್ತು. 2023ರಲ್ಲಿ ಒಟ್ಟು 101 ಪ್ರಕರಣಗಳಲ್ಲಿ 660 ಮಂದಿಯನ್ನು ಬಂಧಿಸಿ, ₹10,83,800 ವಶಪಡಿಸಿಕೊಳ್ಳಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.