ADVERTISEMENT

‘ಮಕ್ಕಳಲ್ಲಿ ಪರಿಸರ ಪ್ರಜ್ಞೆ ಅಗತ್ಯ’

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 15:45 IST
Last Updated 5 ಜೂನ್ 2025, 15:45 IST
ಕಂಪ್ಲಿ ಮಾರುತಿನಗರದ ಅಂಗನವಾಡಿ ಕೇಂದ್ರದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಯುವ ಮುಖಂಡ ವಿ. ಮಹ್ಮದ್ ಗೌಸ್ ಅವರು ಸಸಿನೆಟ್ಟು ನೀರೆರೆದರು
ಕಂಪ್ಲಿ ಮಾರುತಿನಗರದ ಅಂಗನವಾಡಿ ಕೇಂದ್ರದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಯುವ ಮುಖಂಡ ವಿ. ಮಹ್ಮದ್ ಗೌಸ್ ಅವರು ಸಸಿನೆಟ್ಟು ನೀರೆರೆದರು   

ಕಂಪ್ಲಿ: ಇಲ್ಲಿಯ ಮಾರುತಿನಗರದ ಅಂಗನವಾಡಿ ಕೇಂದ್ರದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪರಿಸರ ಪ್ರೇಮಿಗಳು ಗುರುವಾರ ಸಸಿ ನೆಟ್ಟು ನೀರೆರೆದರು.

ಯುವ ಮುಖಂಡ ವಿ. ಮಹ್ಮದ್ ಗೌಸ್ ಮಾತನಾಡಿ, ‘ಭವಿಷ್ಯದ ರೂವಾರಿಗಳಾದ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಜಾಗೃತಿಗೊಳಿಸುವುದು ಅತೀ ಅಗತ್ಯವಾಗಿದೆ. ಪ್ರತಿಯೊಬ್ಬರು ಸಸಿಗಳನ್ನು ನೆಟ್ಟು ಪೋಷಿಸುವುದರಿಂದ ಭವಿಷ್ಯದಲ್ಲಿ ಉತ್ತಮ ಪ್ರಕೃತಿ ನಿರ್ಮಿಸಲು ಸಾಧ್ಯ’ ಎಂದರು.

ಯುವಕರಾದ ಎಚ್.ಸಂಜೀವ, ಎಂ.ಖಾದರ್ ಬಾಷ, ಮಹ್ಮದ್ ವಾಸೀಮ್, ಕೆ.ಮಲ್ಲಿಕಾರ್ಜುನ, ಸಂತೋಷ್, ಯೂನೂಸ್, ಖಾಲಿಚೀಲ ಬಸವರಾಜ, ಅಂಗನವಾಡಿ ಕಾರ್ಯಕರ್ತೆ ಉಷಾ, ಸಹಾಯಕಿ ಶಾಂತಮ್ಮ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.