ತೆಕ್ಕಲಕೋಟೆ (ಬಳ್ಳಾರಿ): ‘ಬೂದಿದಿಬ್ಬದ ಪ್ರಾಗೈತಿಹಾಸಿಕ ತಾಣಗಳಲ್ಲಿ ಉತ್ಪನನ ನಡೆಸಲು ಸ್ಥಳ ಪರಿಶೀಲಿಸಿ ನಾಲ್ಕು ಸ್ಥಳ ಗುರುತಿಸಲಾಗಿದೆ’ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ವಿಜಯನಗರ, ಬಳ್ಳಾರಿ ಜಿಲ್ಲಾ ಪುರಾತತ್ವ ಸರ್ವೇಕ್ಷಣಾಧಿಕಾರಿ ಡಾ.ಶ್ರೀಜೇಶ್ವರ ತಿಳಿಸಿದ್ದಾರೆ.
‘ಅಮೆರಿಕದಲ್ಲಿ ಪ್ರಾಧ್ಯಾಪಕಿಯಾಗಿರುವ ನಮಿತಾ ಎಸ್. ಸುಗಂಧಿ ಎಂಬುವರು ಉತ್ಪನನಕ್ಕೆ ಮನವಿ ಸಲ್ಲಿಸಿದ್ದು, ಬೂದಿದಿಬ್ಬ ಸಮೀಪದ ಹಿರೇಅರಲ, ಗೌಡರ ಮೂಲೆ ಸುತ್ಲ ನಾಲ್ಕು ಜಾಗಗಳನ್ನು ಪರಿಶೀಲಿಸಲಾಗಿದೆ. ಅನುಮತಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಬೂದಿದಿಬ್ಬದ ಹಾಗೂ ಸುತ್ತಲಿನ ಮಹತ್ವದ ಅವಶೇಷಗಳ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಉಡೆಗೋಳ ಹಾಗೂ ನಿಟ್ಟೂರು ಶಾಸನಗಳ ರಕ್ಷಣೆಗೆ ಸ್ಥಳೀಯರೂ ಸಹಕರಿಸಬೇಕು' ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.