ಹೊಸಪೇಟೆ(ವಿಜಯನಗರ): ‘ರಾಜ್ಯದಲ್ಲಿಯೇ ಪ್ರಪ್ರಥಮ ಜಂಪ್ ರೋಪ್ ಒಳಾಂಗಣ ಕ್ರೀಡಾಂಗಣ ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ನಿರ್ಮಾಣವಾಗಲಿದೆ’ ಎಂದು ರಾಜ್ಯ ಜಂಪ್‌ರೋಪ್ ಅಸೋಸಿಯೇಷನ್ ಅಧ್ಯಕ್ಷ ವಿಶ್ವನಾಥ ಚ.ಹಿರೇಮಠ ತಿಳಿಸಿದರು.
‘ಕೊಪ್ಪಳದ ಹನುಮಸಾಗರದಲ್ಲಿ ಜಂಪ್‌ರೋಪ್ ಕ್ರೀಡಾಂಗಣದ ಭೂಮಿಪೂಜೆ ನೆರವೇರಿಸಲಾಗಿದೆ. ಜಂಪ್‌ರೊಪ್ ಗ್ರಾಮೀಣ ಕ್ರೀಡೆಯಾಗಿದೆ. ಗ್ರಾಮಾಂತರ ಪ್ರದೇಶದಿಂದಲೇ ಜಂಪ್‌ರೋಪ್ ಅಸೋಸಿಯೇಷನ್ ಆರಂಭವಾಗಿದ್ದು ಖುಷಿಯ ವಿಚಾರ. ಗ್ರಾಮೀಣ ಕ್ರೀಡೆಗೆ ಹೆಚ್ಚಿನ ಅನುದಾನ ಹರಿದು ಬರಲಿದೆ. ಕೊಪ್ಪಳ, ವಿಜಯನಗರ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ’ ಎಂದು ಬುಧವಾರ ಇಲ್ಲಿ ತಿಳಿಸಿದರು.
ಶಾಸಕ ಅಮರೇಗೌಡ ಬಯ್ಯಾಪುರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಂಕ್ರಮ್ಮ ನಿರ್ವಾಣಿ, ಉಪಾಧ್ಯಕ್ಷ ಮಂಜುನಾಥ ಹುಲ್ಲೂರು, ಸದಸ್ಯರಾದ ಶ್ರೀಶೈಲ ಮೌಟಗಿ, ಪ್ರಶಾಂತ ಕುಲಕರ್ಣಿ, ರಿಯಾಜ ಖಾಜಿ, ಚಂದ್ರ ಬೆಳಗಲ್, ಪಿಡಿಒ ಲಿಂಗಪ್ಪ, ಜಂಪ್‌ರೋಪ್ ಫೆಡರೇಷನ್ ಆಫ್ ಇಂಡಿಯಾದ ನಿರ್ದೇಶಕಿ ರೇಣುಕಾ, ಅನಂತ ಜೋಶಿ, ಅಸೋಸಿಯೇಷನ್ ರಾಜ್ಯ ನಿರ್ದೇಶಕ ಕೆ. ದಿವಾಕರ್, ರಮೇಶ ಪುರೋಹಿತ್, ಅಬ್ದುಲ್ ಕರೀಮ್ ಒಂಟಿಹಳ್ಳಿ, ಗೌಸ್ ಮೋದಿನ್, ಮಾರುತಿ ರಂಗರೇಜ್, ಸೂಚಪ್ಪ ಭೂವಿ, ವಿಶ್ವನಾಥ ಕಣ್ಣನೂರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.