ADVERTISEMENT

ವಿದ್ಯುತ್‌ ಪ್ರವಹಿಸಿ ಜೆಸ್ಕಾಂ ಲೈನ್‌ಮನ್‌ ಸಾವು

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 15:42 IST
Last Updated 6 ಜೂನ್ 2025, 15:42 IST

ಬಳ್ಳಾರಿ: ವಿದ್ಯುತ್‌ ಸಂಪರ್ಕ ನ್ಯೂನತೆ ಸರಿಪಡಿಸಲೆಂದು ಕಂಬವೇರಿದ್ದ ವೇಳೆ ಏಕಾಏಕಿ ವಿದ್ಯುತ್‌ ಪ್ರವಹಿಸಿ ಜೆಸ್ಕಾಂ ಲೈನ್‌ಮನ್‌ ಮೃತಪಟ್ಟಿದ್ದಾರೆ. 

ಗಾಂಧಿನಗರದಲ್ಲಿ ಗುರುವಾರ ಸಂಜೆ ನಡೆದಿರುವ ಈ ಘಟನೆಯಲ್ಲಿ ನಾಗರಾಜ್‌ ಎಂಬುವವರು ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಗಾಂಧಿನಗರ ಠಾಣೆಯಲ್ಲಿ ಜೆಸ್ಕಾಂನ ಸೆಕ್ಷನ್‌ ಅಧಿಕಾರಿ ವೀರೇಶ್‌ ಎಂಬುವವರ ವಿರುದ್ಧ ಗುರುವಾರ ಎಫ್ಐಆರ್‌ ದಾಖಲಾಗಿದೆ. 

ಇದರ ಆಧಾರದಲ್ಲಿ ವೀರೇಶ್‌ ಅವರನ್ನು ಕರ್ತವ್ಯ ನಿರ್ಲಕ್ಷ್ಯದ ಆರೋಪದ ಅಡಿಯಲ್ಲಿ ಅಮಾನತು ಮಾಡಲಾಗಿದೆ ಎಂದು ಜೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ADVERTISEMENT

‘ವಿದ್ಯುತ್‌ಗೆ ಸಿಲುಕಿ ನಾಗರಾಜ್‌ ತೀವ್ರ ಗಾಯಗೊಂಡಿದ್ದರೂ, ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದರೂ, ಅಧಿಕಾರಿಗಳು ಒಂದು ಬಾರಿಯಾದರೂ ಬಂದು ಭೇಟಿಯಾಗಲಿಲ್ಲ’ ಎಂದು ಆರೋಪಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸದಸ್ಯರು ಜೆಸ್ಕಾಂ ಕಚೇರಿಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಒಂದು ಕೋಟಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. 

ಆದರೆ, ನಾಗರಾಜ್‌ ಆರೋಗ್ಯ ವಿಚಾರಿಸಿರುವುದಾಗಿಯೂ, ಈ ಕುರಿತು ಕಚೇರಿಗೆ ವರದಿ ನೀಡಿರುವುದಾಗಿಯೂ ಅಧಿಕಾರಿಗಳು ತಿಳಿಸಿದ್ದಾರೆ. ಅವರಿಗೆ ಸಲ್ಲಬೇಕಾದ ಪರಿಹಾರಗಳನ್ನು ಕೊಡಿಸಲಾಗುತ್ತದೆ ಎಂದೂ ಜೆಸ್ಕಾಂ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.