ADVERTISEMENT

ಸಾಧಿಸುವ ಹಠ, ಛಲ ಇರಲಿ: ಗುಳ್ಳಗಣ್ಣವರ

​ಪ್ರಜಾವಾಣಿ ವಾರ್ತೆ
Published 13 ಜೂನ್ 2025, 14:42 IST
Last Updated 13 ಜೂನ್ 2025, 14:42 IST
ನರೇಗಲ್‌ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ವಿವಿಧ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ‌ ಉಪನ್ಯಾಸ ನೀಡಿದ ಪಿಯು ಪ್ರಾಚಾರ್ಯ ಎಸ್.‌ ಸಿ. ಗುಳಗಣ್ಣವರ ಅವರನ್ನು ಸನ್ಮಾನಿಸಲಾಯಿತು
ನರೇಗಲ್‌ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ವಿವಿಧ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ‌ ಉಪನ್ಯಾಸ ನೀಡಿದ ಪಿಯು ಪ್ರಾಚಾರ್ಯ ಎಸ್.‌ ಸಿ. ಗುಳಗಣ್ಣವರ ಅವರನ್ನು ಸನ್ಮಾನಿಸಲಾಯಿತು   

ನರೇಗಲ್:‌ ಕಾಲೇಜಿನಲ್ಲಿ ಎಷ್ಟೇ ವಿದ್ಯಾರ್ಥಿಗಳಿದ್ದರೂ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಮಾತ್ರ ವಿಶೇಷರಾಗುತ್ತಾರೆ. ಅದಕ್ಕಾಗಿ ಓದಿನ ವಯಸ್ಸಿನಲ್ಲಿ ಸಾಧಿಸಬೇಕು ಎಂಬ ಛಲ ಅಚಲವಾಗಿದ್ದಾಗ ಯಾವ ಸಮಸ್ಯೆಯೂ ತಡೆಯುವುದಿಲ್ಲ ಎಂದು ಪಿಯು ಪ್ರಾಚಾರ್ಯ ಎಸ್.‌ಸಿ.ಗುಳಗಣ್ಣವರ ಹೇಳಿದರು.

ನರೇಗಲ್‌ ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದ 2024-25ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್‌, ರೆಡ್‌ ಕ್ರಾಸ್‌ ,ರೋವರ್ಸ್‌, ರೇಂಜರ್ಸ್‌ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ‌ ಉಪನ್ಯಾಸ ನೀಡಿದರು.

ತರಗತಿಯಲ್ಲಿ ಎಲ್ಲರಿಗೂ ಒಂದೇ ರೀತಿ ಶಿಕ್ಷಣ ಸಿಕ್ಕರೂ ಎಲ್ಲರೂ ಸಾಧನೆ ಮಾಡುವುದಿಲ್ಲ. ಸಾಧಿಸಬೇಕೆಂಬ ಹಠ ಮತ್ತು ಛಲ ಇದ್ದವರು ಮಾತ್ರ ಸಾಧಕರಾಗುತ್ತಾರೆ ಎಂದು ಅಭಿಪ್ರಾಯಪಟ್ಟರು. ಸಮಯ ಹೋದದ್ದೇ ಗೊತ್ತಾಗಲಿಲ್ಲ. ದಿನಗಳು ಬಹಳ ವೇಗವಾಗಿ ಕಳೆದು ಹೋಗುತ್ತಿವೆ. ಏನನ್ನೂ ಸಾಧಿಸಲಾಗಲಿಲ್ಲ ಎಂಬ ಅಳಲು ತೋಡಿಕೊಳ್ಳುವ ಬದಲಿಗೆ ಅದನ್ನು ಉಪಯೋಗಿಸಿಕೊಂಡು, ಪ್ರಾಧ್ಯಾಪಕರ ಮಾರ್ಗದರ್ಶನದಲ್ಲಿ ಉತ್ತಮವಾದ ಜೀವನವನ್ನು ಕಂಡುಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ADVERTISEMENT

ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಮಾತನಾಡಿ, ಹನಮಂತಪ್ಪ.ಎಚ್.‌ ಅಬ್ಬಿಗೇರಿ, ಜೀವನದಲ್ಲಿ ಅಸಾಧ್ಯವಾದುದನ್ನು ಸಾಧಿಸುವ ಛಲ ಮತ್ತು ಆತ್ಮವಿಶ್ವಾಸವಿದ್ದರೆ ಸಾಧನೆ ಹಾದಿ ಸುಲಭವಾಗಲಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿ ಗಳು ಪ್ರಯತ್ನಪಟ್ಟರೆ ಖಂಡಿತಾ ಯಶಸ್ಸು ಲಭಿಸಲಿದೆ ಎಂದು ತಿಳಿಸಿದರು.

ಪದವಿ ಪ್ರಾಚಾರ್ಯ ಎಸ್.‌ಎಲ್.‌ಗುಳೇದಗುಡ್ಡ ಮಾತನಾಡಿ, ಜೀವನದಲ್ಲಿ ಗುರಿ ಇಲ್ಲದಿದ್ದರೆ ಸಾಧನೆ ಅಸಾಧ್ಯ. ಆಯ್ಕೆ ಮಾಡಿಕೊಂಡ ಗುರಿಯನ್ನು ಸಾಧಿಸುತ್ತೇನೆಂಬ ಹಠ ಮತ್ತು ಛಲ ಇದ್ದರೆ ಏನೇ ತೊಡಕುಗಳು ಬಂದರೂ ಸಾಧನೆ ಮಾಡಬಹುದು. ಸಾಧಿಸಿದ ಮೇಲೆ ಕೇವಲ ಕುಟುಂಬಕ್ಕೆ ಸೀಮಿತವಾಗದೆ ಸಮಾಜಕ್ಕೆ, ದೇಶಕ್ಕೆ ನಮ್ಮಿಂದ ಏನಾದರೂ ಕೊಡುಗೆ ನೀಡಬೇಕು ಎಂದರು.

ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು. ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಎಂ.ಎಸ್.‌ಧಡೆಸೂರಮಠ, ಬಸೀರಾಬಾನು ಅಲ್ಲಾಬಕ್ಷಿ ನದಾಫ್‌, ಶರಣಪ್ಪ ಕುರಿ, ದಾವುದ್‌ ಅಲಿ ಕುದರಿ, ವೀರಪ್ಪ ಜೀರ್ಲ, ಆನಂದ ನಡುವಲಕೇರಿ, ರೇಣುಕಾ ಧರ್ಮಾಯತ, ಈ.ಆರ್.‌ಲಗಳೂರ, ಸಜಿಲಾ, ಸಾಂಸ್ಕೃತಿಕ ಸಂಚಾಲಕ ಎಸ್.‌ಎಸ್.‌ಸೂಡಿ, ಐಕ್ಯೂಎಸಿ ಸಂಚಾಲಕಿ ಜಯಶ್ರೀ ಮುತಗಾರ, ಕ್ರೀಡಾ ವಿಭಾಗದ ಸಂಚಾಲಕಿ ಕಾಂಚನಮಾಲಾ ಪಾಟೀಲ, ಎನ್‌ಎಸ್‌ಎಸ್‌ ಸಂಚಾಲಕ ಎಸ್.‌ಪಿ.ಕುರೇರ, ಎಸ್.‌ಎಸ್.‌ಮುಂಜಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.