ADVERTISEMENT

23ರಿಂದ ಹಂಪಿ ಕನ್ನಡ ವಿ.ವಿ. ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 13 ಮೇ 2019, 12:27 IST
Last Updated 13 ಮೇ 2019, 12:27 IST

ಹೊಸಪೇಟೆ: ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿವಿಧ ಕೋರ್ಸ್‌ಗಳ ಪರೀಕ್ಷೆ ಮೇ 23ರಿಂದ ನಡೆಯಲಿವೆ.

ಮೇ 13ರಿಂದ ಪರೀಕ್ಷೆಗಳು ನಡೆಯಬೇಕಿತ್ತು. ವಿಷಾಹಾರ ಸೇವನೆಯಿಂದ ವಿ.ವಿ. ವಿದ್ಯಾರ್ಥಿ ನಿಲಯದ 40 ವಿದ್ಯಾರ್ಥಿನಿಯರು ಇತ್ತೀಚೆಗೆ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈಗಷ್ಟೇ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಪರೀಕ್ಷೆ ಮುಂದೂಡಲಾಗಿದೆ.

‘ಎಂ.ಎ., ಪಿಎಚ್‌.ಡಿ., ಇತಿಹಾಸ ಮತ್ತು ಪುರಾತತ್ವ, ಸಮಾಜಶಾಸ್ತ್ರ, ಗ್ರಾಮೀಣ ಅಭಿವೃದ್ಧಿ ಎರಡು ಮತ್ತು ನಾಲ್ಕನೇ ಸೆಮಿಸ್ಟರ್‌ ಪರೀಕ್ಷೆಗಳು ಮೇ 23ರಿಂದ 30ರ ವರೆಗೆ ಜರುಗಲಿವೆ. ಎಂ.ಎ. ಪತ್ರಿಕೋದ್ಯಮ ಎರಡು ಮತ್ತು ನಾಲ್ಕನೇ ಸೆಮಿಸ್ಟರ್‌ ಪರೀಕ್ಷೆ ಮೇ 23ರಿಂದ 29ರ ವರೆಗೆ ನಡೆಯಲಿವೆ. ಎಂ. ಮ್ಯೂಸಿಕ್‌ ಎರಡು ಮತ್ತು ನಾಲ್ಕನೇ ಸೆಮಿಸ್ಟರ್‌ ಪರೀಕ್ಷೆ ಮೇ 23ರಿಂದ ಜೂ. 10ರ ವರೆಗೆ, ಎಂ.ವಿ.ಎ ಎರಡು ಮತ್ತು ನಾಲ್ಕನೇ ಸೆಮಿಸ್ಟರ್‌ ಮೇ 23ರಿಂದ ಜೂ. 15ರ ವರೆಗೆ, ಬಿ. ಮ್ಯೂಸಿಕ್‌ ಎರಡು ಮತ್ತು ಮೂರನೇ ಸೆಮಿಸ್ಟರ್‌ ವಾರ್ಷಿಕ ಪರೀಕ್ಷೆ ಮೇ 23ರಿಂದ 30ರ ವರೆಗೆ, ಎಂ.ಫಿಲ್‌ ಮೇ 23ರಿಂದ 27ರ ವರೆಗೆ ನಡೆಯಲಿವೆ’ ಎಂದು ಕುಲಸಚಿವ ಅಶೋಕಕುಮಾರ ರಂಜೇರೆ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.