ಬಳ್ಳಾರಿ: ಬಳ್ಳಾರಿ ಕೈಮಗ್ಗ ನೇಕಾರ ಸಹಕಾರ ಸಂಘ, ಉತ್ಪತ್ತಿ ಮತ್ತು ಮಾರಾಟದಾರ ಸಂಘದ ನಿರ್ದೇಶಕಿ ಲಕ್ಷ್ಮಿದೇವಿ ಅವರ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಸಂಘದ ಕಾರ್ಯದರ್ಶಿಯಾಗಿ ಕೆ.ರಂಗಸ್ವಾಮಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ನಗರದ ಗ್ರಾಮಾಂತರ ಠಾಣೆಗೆ ಲಕ್ಷ್ಮೀ ದೇವಿ ಅವರು ಜುಲೈ 12ರಂದು ದೂರು ನೀಡಿದ್ದು, ಇದನ್ನು ಆದರಿಸಿ ರಂಗಸ್ವಾಮಿ ಅವರ ವಿರುದ್ಧ ಎಫ್‌ಐಆರ್ ಹಾಕಲಾಗಿದೆ.
ರಂಗಸ್ವಾಮಿ ಅವರ ವರ್ತನೆ ವಿರುದ್ಧ ಸಂಘದ ಸದಸ್ಯ ಲಕ್ಷ್ಮೀನಾರಾಯಣ ಎಂಬುವವರು ಜಿಲ್ಲಾ ಸಹಕಾರ ಸಂಘಗಳ ನಿಬಂಧಕರಿಗೆ ದೂರು ನೀಡಿದ್ದರು ಎನ್ನಲಾಗಿದೆ. ಆದರೆ, ಲಕ್ಷ್ಮೀ ದೇವಿ ಅವರೇ ದೂರು ನೀಡಿದ್ದಾರೆ ಎಂದು ಭಾವಿಸಿದ ರಂಗಸ್ವಾಮಿ, ಆಕೆ ಮನೆಗೆ ನುಗ್ಗಿದ್ದೂ ಅಲ್ಲದೇ, ಅವಾಚ್ಯ ಶಬ್ಧಗಳಿಂದ ನಿಂಧಿಸಿ, ಹಲ್ಲೆ ಮಾಡಿದ್ದಾರೆ. ಜತೆಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.