
ಪ್ರಜಾವಾಣಿ ವಾರ್ತೆ
ಹರಪನಹಳ್ಳಿ: ಪಟ್ಟಣದ ವಿವಿಧ ಅಂಗಡಿಗಳ ಮೇಲೆ ಶನಿವಾರ ದಾಳಿ ನಡೆಸಿದ ಪುರಸಭೆ ಅಧಿಕಾರಿಗಳು 25 ಕೆ.ಜಿ. ನಿಷೇಧಿತ ಪ್ಲಾಸ್ಟಿಕ್ ಜಪ್ತಿ ಮಾಡಿ, ₹4,000 ದಂಡ ವಿಧಿಸಿದ್ದಾರೆ.
ಬಸ್ ನಿಲ್ದಾಣ, ಪುರಸಭೆಯ ಮಳಿಗೆಗಳು, ತೆಗ್ಗಿನಮಠ ರಸ್ತೆ, ಸಂತೆ ಮೈದಾನ ರಸ್ತೆ, ಆಂಜನೇಯ ಬಡಾವಣೆ, ಹಳೇ ಬಸ್ ನಿಲ್ದಾಣ ಸೇರಿದಂತೆ ವಿವಿಧೆಡೆ ದಾಳಿ ನಡೆಸಲಾಯಿತು.
ಪುರಸಭೆ ಪರಿಸರ ಎಂಜಿನಿಯರ್ ಅಮರೇಶ್, ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ್, ನೈರ್ಮಲ್ಯ ಮೇಲ್ವಿಚಾರಕ ಉಚ್ಚಂಗೆಪ್ಪ, ಶಾಮರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.