ಹರಪನಹಳ್ಳಿ: ಅಕ್ರಮವಾಗಿ ಗೋವುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದಾಗ ಪಟ್ಟಣದ ಹಡಗಲಿ ರಸ್ತೆ ಟೋಲ್ ಬಳಿ ಇಬ್ಬರು ಆರೋಪಿಗಳನ್ನು ಬಂಧಿಸಿ, ಆಟೊ ಜಪ್ತಿ ಮಾಡಿರುವ ಪೊಲೀಸರು ಭಾನುವಾರ ಜಾನುವಾರುಗಳನ್ನು ರಕ್ಷಿಸಿದ್ದಾರೆ.
ಬಾಗಳಿ ಗ್ರಾಮದ ಅಂಜಿನಪ್ಪ ಮತ್ತು ಹರಪನಹಳ್ಳಿ ಗುಣಿಕೇರಿಯ ಮಾಬುಸಾಬ್ ಬಂಧಿತರು. ಆಟೊದಲ್ಲಿ ಜಾನುವಾರುಗಳನ್ನು ಅಮಾನುಷವಾಗಿ ಇಕ್ಕಟ್ಟಾದ ಜಾಗದಲ್ಲಿ ಒಂದರ ಮೇಲೊಂದು ತುಂಬಿ ಹಿಂಸೆಗೆ ಒಳಪಡಿಸಿ ಹೆಚ್ಚಿನ ಬೆಲೆಗೆ ಕಸಾಯಿಖಾನೆಗೆ ಮಾರಾಟ ಮಾಡಲು ಹೊರಟಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲಾಗಿದೆ. ವಾಹನ ತಡೆದು ವಿಚಾರಿಸಿದಾಗ ಮಾಂಸಕ್ಕಾಗಿ ಕಸಾಯಿಖಾನೆಗೆ ಸಾಗಿಸುತ್ತಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಿಂದ ₹ 30 ಸಾವಿರ ಬೆಲೆಯ 2 ಆಕಳು, 1 ಕರು ಜಪ್ತಿ ಮಾಡಿಕೊಂಡಿದ್ದಾರೆ. ಹರಪನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.