
ಪ್ರಜಾವಾಣಿ ವಾರ್ತೆ
ಹರಪನಹಳ್ಳಿ: ತಾಲ್ಲೂಕಿನ ಅನಂತನಹಳ್ಳಿ ಮೆಳ್ಳೆಕಟ್ಟೆಯಲ್ಲಿನ ಜಮೀನಿನಲ್ಲಿ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಮೆಕ್ಕೆಜೋಳ ಮೇವಿನ 10 ಬಣವೆಗಳು ಭಾನುವಾರ ಸುಟ್ಟು ಬೂದಿಯಾಗಿವೆ.
ಟಿ.ಎಂ. ರಾಜಶೇಖರ ಅವರಿಗೆ ಸೇರಿದ ಜಮೀನಿನಲ್ಲಿ ಕಟಾವು ಮಾಡಿದ್ದ ಮೆಕ್ಕೆಜೋಳದ ಸೊಪ್ಪೆ ಸಂಗ್ರಹಿಸಿ, ಜಾನುವಾರುಗಳಿಗಾಗಿ ಮೇವಿನ ಬಣವೆ ಹಾಕಿಕೊಂಡಿದ್ದರು. ಬೇರೆ ಹೊಲದಲ್ಲಿ ಕಸ ಸುಡುವ ಸಲುವಾಗಿ ಹಚಿದ್ದ ಬೆಂಕಿ ವ್ಯಾಪಿಸಿ, ಬಣವೆಗೆ ಹೊತ್ತಿ ಉರಿದಿದೆ.
ಅಗ್ನಿಶಾಮಕ ದಳದವರು ಬರುವ ವೇಳೆಗೆ ಬಣವೆಗಳು ಸಂಪೂರ್ಣ ಸುಟ್ಟಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.