ಹರಪನಹಳ್ಳಿ : ತಾಲ್ಲೂಕಿನ ತೆಲಿಗಿ ಗ್ರಾಮದಲ್ಲಿ ಭಾನುವಾರ ಸುರಿದ ಗುಡುಗು ಸಹಿತ ಮಳೆಯಲ್ಲಿ ಸಿಡಿಲು ಬಡಿದು ಒಬ್ಬ ರೈತ ಮೃತಪಟ್ಟಿದ್ದು, ಒಂದು ಆಕಳು ಸಾವನ್ನಪ್ಪಿದೆ.
ತೆಲಿಗಿ ಗ್ರಾಮದ ರೈತ ಬಿ.ಹಾಲೇಶಪ್ಪ (55) ಮೃತರು. ಅವರಿಗೆ ಸೇರಿದ್ದ ಒಂದು ಆಕಳೂ ಮೃತಪಟ್ಟಿದೆ. ರಾಗಿ ಮಸಲವಾಡ ರಸ್ತೆ ಸುತ್ತಮುತ್ತ ಜಮೀನಿನಲ್ಲಿ ಆಕಳು ಮೇಯಿಸಲು ಹೋಗಿದ್ದಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.