ಹೂವಿನಹಡಗಲಿ: ತಾಲ್ಲೂಕಿನ ಹೊಳಲು ಗ್ರಾಮದ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ಜಾತ್ರಾ ಸಿದ್ದತಾ ಸಭೆ ಜರುಗಿತು.
ಏ. 19 ರಂದು ಸ್ವಾಮಿಗೆ ಕಂಕಣಧಾರಣೆಯೊಂದಿಗೆ ಜಾತ್ರೆ ಕಾರ್ಯಕ್ರಮಗಳು ಪ್ರಾರಂಭವಾಗಲಿವೆ. ಏ.24 ರಂದು ಸಂಜೆ 5 ಗಂಟೆಗೆ ರಥೋತ್ಸವ, 25 ರಂದು ಮಧ್ಯಾಹ್ನ ಅಗ್ನಿ, ಸಂಜೆ ಓಕುಳಿ ಉತ್ಸವ ಸೇರಿದಂತೆ ಎಲ್ಲ ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.
ಗ್ರಾ.ಪಂ ಅಧ್ಯಕ್ಷ ಮಂಜಪ್ಪ ಹಲಗೇರಿ, ಜಾತ್ರಾ ಸಮಿತಿ ಗೌರವ ಅಧ್ಯಕ್ಷ ರೇವಣಪ್ಪ ದೇವರಮನಿ, ಅಧ್ಯಕ್ಷ ಜಗದೀಶ ದೇವಶೆಟ್ಟಿ, ಪದಾಧಿಕಾರಿಗಳಾದ ರುದ್ರಪ್ಪ ಯೋಗಿ, ಚನ್ನಪ್ಪ ಹೊಟ್ಟಿಗೌಡ್ರ, ಎಚ್.ಎಂ.ಬಸಯ್ಯ, ವೀರಪ್ಪ ಯೋಗಿ, ಬಸಣ್ಣ ದಕ್ಷಟ್ಟಿ, ಗುರುಲಿಂಗಪ್ಪ ಹಾವೇರಿ, ಹೇಮಪ್ಪ ಗೋರಪ್ಪನವರ, ಶಿವಪ್ಪ ತೋಟ್ರ, ಷಣ್ಮುಖಪ್ಪ ಯತ್ನಳ್ಳಿ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.