ADVERTISEMENT

ಲೋಕ ಅದಾಲತ್‌: ಒಂದಾದ ದಂಪತಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2024, 16:12 IST
Last Updated 14 ಸೆಪ್ಟೆಂಬರ್ 2024, 16:12 IST
ಹೂವಿನಹಡಗಲಿ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ದಂಪತಿಯನ್ನು ಒಗ್ಗೂಡಿಸಲಾಯಿತು
ಹೂವಿನಹಡಗಲಿ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ದಂಪತಿಯನ್ನು ಒಗ್ಗೂಡಿಸಲಾಯಿತು   

ಹೂವಿನಹಡಗಲಿ: ಇಲ್ಲಿನ ಜೆಎಂಎಫ್ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿಯನ್ನು, ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಗ್ಗೂಡಿಸಲಾಯಿತು.

ತಳಕಲ್ಲು ಗ್ರಾಮದ ಭೋವಿ ಕಲ್ಲಮ್ಮ ಅವರು ಪತಿ ಎಚ್.ಲಕ್ಷ್ಮ ಕೆರೆಗೂಡಳ್ಳಿ ಅವರಿಂದ ಜೀವನಾಂಶಕ್ಕಾಗಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.  ನ್ಯಾಯಾಧೀಶೆ ಟಿ. ಅಕ್ಷತಾ ಅವರು ದಂಪತಿಗೆ ತಿಳಿವಳಿಕೆ ಮೂಡಿಸಿದಾಗ ಒಟ್ಟಿಗೆ ಬಾಳಲು ಇಬ್ಬರೂ ಸಮ್ಮತಿಸಿದರು.

ವಕೀಲರ ಸಂಘದ ಅಧ್ಯಕ್ಷ ಜಿ. ವಸಂತಕುಮಾರ್, ವಕೀಲರಾದ ಎಸ್. ಶಿವಲಿಂಗಪ್ಪ, ಎಸ್.ಶಂಶೀರ್, ಪ್ರಕಾಶ, ಎಂ.ಎನ್.ಮಂಜುನಾಥ, ಹೊಸಮನಿ ಅಂಜಿನಪ್ಪ ಇದ್ದರು.

ADVERTISEMENT

541 ವ್ಯಾಜ್ಯಗಳ ಪೈಕಿ 524 ಪ್ರಕರಣಗಳು ಇತ್ಯರ್ಥಗೊಂಡವು. ₹61.33 ಲಕ್ಷ ಪರಿಹಾರ ಮೊತ್ತದ ಪ್ರಕರಣಗಳು ರಾಜಿಯಲ್ಲಿ ಮುಕ್ತಾಯಗೊಂಡವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.