ADVERTISEMENT

ಆದಾಯ ಹೆಚ್ಚಿಸುವ ರೈತ ಉತ್ಪಾದಕ ಕಂಪನಿ: ಮಂಜುನಾಥರೆಡ್ಡಿ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2024, 14:36 IST
Last Updated 29 ಆಗಸ್ಟ್ 2024, 14:36 IST
ತೋರಣಗಲ್ಲು ಗ್ರಾಮದ ಜಿಂದಾಲ್‌ನ ಒಪಿಜೆ ಕೇಂದ್ರದಲ್ಲಿ ನಡೆದ ರೈತ ಉತ್ಪಾದಕ ಕಂಪನಿಗಳ ತರಬೇತಿ ಕಾರ್ಯಾಗಾರಕ್ಕೆ ಗಣ್ಯರು ಗುರುವಾರ ಚಾಲನೆ ನೀಡಿದರು
ತೋರಣಗಲ್ಲು ಗ್ರಾಮದ ಜಿಂದಾಲ್‌ನ ಒಪಿಜೆ ಕೇಂದ್ರದಲ್ಲಿ ನಡೆದ ರೈತ ಉತ್ಪಾದಕ ಕಂಪನಿಗಳ ತರಬೇತಿ ಕಾರ್ಯಾಗಾರಕ್ಕೆ ಗಣ್ಯರು ಗುರುವಾರ ಚಾಲನೆ ನೀಡಿದರು   

ತೋರಣಗಲ್ಲು: ‘ಗ್ರಾಮೀಣ ಪ್ರದೇಶದ ಬಡ ರೈತರು ತಾವು ಬೆಳೆದ ಬೆಳೆಯನ್ನು ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ರೈತ ಉತ್ಪಾದಕ ಕಂಪನಿಗಳಿಗೆ ಮಾರಾಟ ಮಾಡುವ ಮೂಲಕ ಹೆಚ್ಚಿನ ಆದಾಯ ಗಳಿಸಬಹುದು’ ಎಂದು ಸಂಡೂರು ತಾಲ್ಲೂಕಿನ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥರೆಡ್ಡಿ ಹೇಳಿದರು.

ಗ್ರಾಮದ ಜಿಂದಾಲ್ ಕಾರ್ಖಾನೆಯ ಒಪಿಜೆ ಕೇಂದ್ರದ ಸಭಾಂಗಣದಲ್ಲಿ ಕೃಷಿ ಇಲಾಖೆ, ಜಿಂದಾಲ್ ಫೌಂಡೇಷನ್ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ರೈತ ಉತ್ಪಾದಕ ಕಂಪನಿಗಳ ತರಬೇತಿ ಕಾರ್ಯಾಗಾರ, ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ರೈತ ಉತ್ಪಾದಕ ಕಂಪನಿಗಳಿಂದ ಬಡ ರೈತರಿಗೆ ನೇರ ಮಾರುಕಟ್ಟೆ ಸೌಲಭ್ಯದ ಜೊತೆಗೆ ಕೃಷಿ ಉತ್ಪನ್ನಗಳಿಗೆ ಸಕಾಲದಲ್ಲಿ ಉತ್ತಮ ದರ ಸಿಗಲಿದೆ. ರೈತ ಉತ್ಪಾದಕ ಕಂಪನಿಗಳು ರೈತರಿಗೆ ಕಡಿಮೆ ದರದಲ್ಲಿ ಬೀಜ, ಗೊಬ್ಬರ ಮತ್ತು ಉತ್ತಮ ಮಾರ್ಗದರ್ಶನ ನೀಡಲಿವೆ’ ಎಂದರು.

ADVERTISEMENT

ವಿವಿಧ ಗ್ರಾಮಗಳ 95ಕ್ಕೂ ಹೆಚ್ಚು ರೈತ ಪ್ರತಿನಿಧಿಗಳು, 11 ರೈತ ಉತ್ಪಾದಕ ಕಂಪನಿಗಳ ಮುಖ್ಯಸ್ಥರು ಭಾಗವಹಿಸಿದ್ದರು.

ಜಿಂದಾಲ್ ಫೌಂಡೇಷನ್ ಸಿಎಸ್‍ಆರ್ ವ್ಯವಸ್ಥಾಪಕ ಪೆದ್ದಣ್ಣ ಬಿಡಾಲ, ಕೃಷಿ ಸಂಯೋಜಕ ನಾಗನಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.