ADVERTISEMENT

ರೈಲ್ವೆ ಮಾರ್ಗದ ವಿದ್ಯುದ್ದೀಕರಣ ಕಾಮಗಾರಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 14:07 IST
Last Updated 24 ಸೆಪ್ಟೆಂಬರ್ 2020, 14:07 IST

ಹೊಸಪೇಟೆ: ನಗರದ ಕಾರಿಗನೂರಿನಿಂದ ಗದಗ ಜಿಲ್ಲೆಯ ಹರ್ಲಾಪುರ ವರೆಗೆ ಕೈಗೊಂಡ ರೈಲು ಮಾರ್ಗದ ವಿದ್ಯುದ್ದೀಕರಣದ ಕಾಮಗಾರಿಯನ್ನು ರೈಲ್ವೆ ಇಲಾಖೆಯ ಅಧಿಕಾರಿಗಳು ಗುರುವಾರ ಪರಿಶೀಲನೆ ನಡೆಸಿದರು.

ರೈಲ್ವೆ ಸುರಕ್ಷತಾ ವಿಭಾಗದ ಆಯುಕ್ತ ಎ.ಕೆ. ರೈ, ಡಿಆರ್‌ಎಂ ಅರವಿಂದ ಮಳಖೇಡೆ ಅವರು ಕಾರಿಗನೂರಿನಲ್ಲಿ ರೈಲಿಗೆ ಪೂಜೆ ಸಲ್ಲಿಸಿ, ಕಾಮಗಾರಿ ವೀಕ್ಷಣೆಗೆ ಚಾಲನೆ ನೀಡಿದರು. ಕಾರಿಗನೂರಿನಿಂದ ಹರ್ಲಾಪುರ, ಹರ್ಲಾಪುರದಿಂದ ಕಾರಿಗನೂರಿನ ವರೆಗೆ ಸಂಚರಿಸಿ, ವಿದ್ಯುದ್ದೀಕರಣ ಕಾಮಗಾರಿ ಪರಿಶೀಲಿಸಿ, ಸ್ಥಳದಲ್ಲೇ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದರು.

‘ಈ ಮಾರ್ಗದಲ್ಲಿ ವಿದ್ಯುದ್ದೀಕರಣ ಕಾಮಗಾರಿ ಪೂರ್ಣಗೊಂಡಿದೆ. ಈ ಮಾರ್ಗದಲ್ಲಿ ಓಡಾಡುವ ರೈಲುಗಳು ಇನ್ನೂ ಮುಂದೆ ಸಂಚರಿಸುವುದಕ್ಕೆ ಬಹಳ ಕಡಿಮೆ ಅವಧಿ ತೆಗೆದುಕೊಳ್ಳಲಿವೆ’ ಎಂದು ಎ.ಕೆ. ರೈ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.