ADVERTISEMENT

‘ಇಷ್ಟಲಿಂಗ ಪೂಜೆಯಿಂದ ಏಕಾಗ್ರತೆ’

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2019, 12:36 IST
Last Updated 19 ಅಕ್ಟೋಬರ್ 2019, 12:36 IST
ಕಾರ್ಯಕ್ರಮದಲ್ಲಿ ಸಂಗನಬಸವ ಸ್ವಾಮೀಜಿ ಮಾತನಾಡಿದರು
ಕಾರ್ಯಕ್ರಮದಲ್ಲಿ ಸಂಗನಬಸವ ಸ್ವಾಮೀಜಿ ಮಾತನಾಡಿದರು   

ಹೊಸಪೇಟೆ: ‘ನಿತ್ಯ ಭಕ್ತಿ, ನಿಷ್ಠೆಯಿಂದ ಇಷ್ಟಲಿಂಗ ಪೂಜೆ ಮಾಡಿದರೆ ಏಕಾಗ್ರತೆ ಹೆಚ್ಚಾಗುತ್ತದೆ’ ಎಂದು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಸಂಗನಬಸವ ಸ್ವಾಮೀಜಿ ಹೇಳಿದರು.

ಇತ್ತೀಚೆಗೆ ಇಲ್ಲಿನ ಕೊಟ್ಟೂರು ಸ್ವಾಮಿ ಮಠದಲ್ಲಿ ಆಯೋಜಿಸಿದ್ದ ಶಿವಾನುಭವ ಸಂಪದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ‘ಶಿವನನ್ನು ಇಷ್ಟಲಿಂಗದಲ್ಲೇ ಕಾಣಬಹುದು. ಹೀಗಾಗಿ ವೀರಶೈವರೆಲ್ಲರೂ ತಪ್ಪದೇ ಲಿಂಗಧಾರಣೆ ಮಾಡಬೇಕು’ ಎಂದು ಸಲಹೆ ಮಾಡಿದರು.

‘ಮಠದ ವತಿಯಿಂದ ಬರುವ ದಿನಗಳಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮ ಆಯೋಜಿಸಲಾಗುವುದು. ಯಾರು ಬೇಕಾದರೂ ಅದರಲ್ಲಿ ಭಾಗವಹಿಸಬಹುದು.ಲಿಂಗಧಾರಣೆಯಿಂದ ಹೃದಯ ವೈಶಾಲ್ಯತೆ ಹೆಚ್ಚಾಗಿ ಪ್ರಗತಿಪರ, ಸಮಾಜಮುಖಿ ಚಿಂತನೆಗಳು ಬೆಳೆಯುತ್ತವೆ’ ಎಂದು ತಿಳಿಸಿದರು.

ADVERTISEMENT

ಸಾಹಿತಿ ಮೃತ್ಯುಂಜಯ ರುಮಾಲೆ ಮಾತನಾಡಿ, ‘ಇಷ್ಟಲಿಂಗ ಪೂಜೆಯಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಬಹುದು ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಅದರಿಂದ ಅನೇಕ ಪ್ರಯೋಜನಗಳಿವೆ’ ಎಂದು ಹೇಳಿದರು.

ಗರಗ ನಾಗಲಾಪುರ ಒಪ್ಪತ್ತೇಶ್ವರ ಮಠದ ಮರಿಮಹಾಂತ ಸ್ವಾಮಿ, ಹಾಲಕೇರಿ ಅನ್ನದಾನೇಶ್ವರ ಮಠದ ಮುಪ್ಪಿನ ಬಸವಲಿಂಗ ದೇವರು, ದರೂರಿನ ವಿರಕ್ತಮಠದ ಕೊಟ್ಟೂರು ದೇಶಿಕರು, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಅಧ್ಯಕ್ಷ ಸಾಲಿ ಸಿದ್ದಯ್ಯ ಸ್ವಾಮಿ, ರಾಜ್ಯ ಸರ್ಕಾರಿ ನೌಕರರ ಸಂಘದ ಗೌರವ ಅಧ್ಯಕ್ಷ ಎನ್.ಎಸ್.ರೇವಣಸಿದ್ದಪ್ಪ, ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನಗೌಡ,ಬಿ.ಸಿ.ಸುರೇಶ, ಬಿ.ಎಂ.ಜಯರಾಮ್, ಕಡ್ಲಿ ವೀರಭದ್ರೇಶ, ಸಿ.ಎಸ್.ಶರಣಯ್ಯ ಚರಂತಿಮಠ, ಎಸ್.ಎಂ.ಕೊಟ್ರಬಸಯ್ಯ,ಬಿ.ಎಚ್.ಎಂ.ಕುಮಾರ, ರುದ್ರಗೌಡ ಪಾಟೀಲ, ಎ.ಎಸ್‌. ಕುಷ್ಟಗಿ ಇದ್ದರು. ಜಯಣ್ಣ ಅಕ್ಕಸಾಲಿ ಹಾಗೂ ವೆಂಕಟೇಶ ಚಿತ್ರಗಾರ ವಚನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.