ADVERTISEMENT

ಹೂವಿನಹಡಗಲಿ: ‘ಕಾಯಕ ಗ್ರಾಮ’ ಪರಿಣಾಮಕಾರಿ ಅನುಷ್ಠಾನಕ್ಕೆ ಸಿಇಒ ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 5:58 IST
Last Updated 13 ಡಿಸೆಂಬರ್ 2025, 5:58 IST
ಹೂವಿನಹಡಗಲಿ ತಾಲ್ಲೂಕು ಹಗರನೂರು ಗ್ರಾಮದಲ್ಲಿ ಸ್ವಯಂ ಚಾಲಿತ ತೆರಿಗೆ ಪಾವತಿ ರಸೀದಿ ಮಷಿನ್ ಅನ್ನು ಜಿಲ್ಲಾ ಪಂಚಾಯಿತಿ ಸಿಇಒ ನೋಂಗ್ಜಾಯ್ ಮಹಮ್ಮದ್ ಅಲಿ ಅಕ್ರಂ ಷಾ ವೀಕ್ಷಿಸಿದರು 
ಹೂವಿನಹಡಗಲಿ ತಾಲ್ಲೂಕು ಹಗರನೂರು ಗ್ರಾಮದಲ್ಲಿ ಸ್ವಯಂ ಚಾಲಿತ ತೆರಿಗೆ ಪಾವತಿ ರಸೀದಿ ಮಷಿನ್ ಅನ್ನು ಜಿಲ್ಲಾ ಪಂಚಾಯಿತಿ ಸಿಇಒ ನೋಂಗ್ಜಾಯ್ ಮಹಮ್ಮದ್ ಅಲಿ ಅಕ್ರಂ ಷಾ ವೀಕ್ಷಿಸಿದರು    

ಹೂವಿನಹಡಗಲಿ: ‘ಅಭಿವೃದ್ಧಿಯಲ್ಲಿ ಹಿಂದುಳಿದಿರುವ ತಾಲ್ಲೂಕಿನ ಆರು ಗ್ರಾಮ ಪಂಚಾಯಿತಿಗಳನ್ನು ‘ಕಾಯಕ ಗ್ರಾಮ’ ಯೋಜನೆಗೆ ಆಯ್ಕೆ ಮಾಡಲಾಗಿದ್ದು, ಮಾರ್ಗಸೂಚಿಯಂತೆ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು’ ಎಂದು ವಿಜಯನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೋಂಗ್ಜಾಯ್ ಮಹಮ್ಮದ್ ಅಲಿ ಅಕ್ರಂ ಷಾ ಸೂಚಿಸಿದರು.

ತಾಲ್ಲೂಕಿನ ಮಕರಬ್ಬಿ ಗ್ರಾಮದಲ್ಲಿ ಗುರುವಾರ ‘ಕಾಯಕ ಗ್ರಾಮ’ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಮಕರಬ್ಬಿ, ಬೀರಬ್ಬಿ, ಮಾಗಳ, ಉತ್ತಂಗಿ, ಸೋಗಿ, ಪಶ್ಚಿಮ ಕಾಲ್ವಿ ಗ್ರಾಮ ಪಂಚಾಯಿತಿಗಳನ್ನು ‘ಕಾಯಕ ಗ್ರಾಮ’ ಯೋಜನೆಗೆ ಆಯ್ಕೆ ಮಾಡಲಾಗಿದ್ದು, ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ.

ADVERTISEMENT

‘15ನೇ ಹಣಕಾಸು ಯೋಜನೆ, ಸ್ಥಳೀಯ ಸಂಸ್ಥೆಯ ನಿಧಿ, ನರೇಗಾ ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಂಡು ಪಂಚಾಯಿತಿಯನ್ನು ಅಭಿವೃದ್ಧಿಪಡಿಸಬೇಕು. ಗ್ರಾಮಗಳಲ್ಲಿ ನೈರ್ಮಲ್ಯ, ಬೀದಿದೀಪ, ಕುಡಿಯುವ ನೀರು ಸೇರಿದಂತೆ ಸಾರ್ವಜನಿಕರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು’ ಎಂದು ತಿಳಿಸಿದರು.

ಇದಕ್ಕೂ ಮುನ್ನ ತಾಲ್ಲೂಕಿನ ಇಟ್ಟಿಗಿ, ಹೊಳಗುಂದಿ, ದಾಸರಹಳ್ಳಿ ತಾಂಡಾ ಗ್ರಾಮಗಳಲ್ಲಿ ಅನುಷ್ಠಾನಗೊಳ್ಳಲಿರುವ ಬೂದು ನೀರು ನಿರ್ವಹಣಾ ಕಾಮಗಾರಿ ಸ್ಥಳ ಪರಿಶೀಲಿಸಿದರು. ಹಗರನೂರು ಗ್ರಾಮದ ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ವೀಕ್ಷಿಸಿದರು. ನಂತರ ಗ್ರಾಮದಲ್ಲಿ ತೆರಿಗೆ ವಸೂಲಾತಿ ಕಾರ್ಯ ಪರಿಶೀಲಿಸಿದರು.

ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯಕ್ರಮ ಅಧಿಕಾರಿ ಎಂ.ಉಮೇಶ, ತಾ.ಪಂ. ಇಒ ಜಿ.ಪರಮೇಶ್ವರ, ಎಇಇ ಕುಬೇಂದ್ರನಾಯ್ಕ, ನರೇಗಾ ಸಹಾಯಕ ನಿರ್ದೇಶಕ ಡಿ.ವೀರಣ್ಣನಾಯ್ಕ ಇತರರು ಇದ್ದರು.

ಹೂವಿನಹಡಗಲಿ ತಾಲ್ಲೂಕು ಹಗರನೂರು ಗ್ರಾಮದ ಆಸ್ತಿ ಮಾಲೀಕರಿ ಜಿ.ಪಂ. ಸಿಇಒ ನೋಂಗ್ಜಾಯ್ ಮಹಮ್ಮದ್ ಅಲಿ ಅಕ್ರಂ ಷಾ ಅವರು ಸ್ವಯಂ ಚಾಲಿತ ಯಂತ್ರದಿಂದ ತೆರಿಗೆ ಪಾವತಿ ರಸೀದಿ ನೀಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.