ADVERTISEMENT

ತಟ್ಟೆಯಲ್ಲಿ ಅನ್ನ ಬಿಡುವುದು ರೈತರಿಗೆ ಮಾಡುವ ಅಪಮಾನ: ಶಿವಾಚಾರ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 2:07 IST
Last Updated 24 ಜನವರಿ 2026, 2:07 IST
ಕೂಡ್ಲಿಗಿ ತಾಲ್ಲೂಕು ಗುಂಡುಮುಣುಗು ಗ್ರಾಮದಲ್ಲಿ ಗುರುವಾರ ನಡೆದ ಧರ್ಮಸಭೆಯಲ್ಲಿ ಕಣ್ವಕುಪ್ಪೆ ಗವಿಮಠದ ಪೀಠಾಧ್ಯಕ್ಷರಾದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ತಿಪ್ಪೆಸ್ವಾಮಿ ಇತರರು ಗೌರವ ಸಮರ್ಪಿಸಿದರು
ಕೂಡ್ಲಿಗಿ ತಾಲ್ಲೂಕು ಗುಂಡುಮುಣುಗು ಗ್ರಾಮದಲ್ಲಿ ಗುರುವಾರ ನಡೆದ ಧರ್ಮಸಭೆಯಲ್ಲಿ ಕಣ್ವಕುಪ್ಪೆ ಗವಿಮಠದ ಪೀಠಾಧ್ಯಕ್ಷರಾದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ತಿಪ್ಪೆಸ್ವಾಮಿ ಇತರರು ಗೌರವ ಸಮರ್ಪಿಸಿದರು   

ಕೂಡ್ಲಿಗಿ: ತಟ್ಟೆಯಲ್ಲಿ ಅನ್ನ ಬಿಡುವುದು, ಚೆಲ್ಲುವುದು ರೈತರಿಗೆ ಹಾಗೂ ಅನ್ನಪೂರ್ಣೇಶ್ವರಿಗೆ ಮಾಡುವ ಅಪಮಾನ. ಅದ್ದರಿಂದ ಅನ್ನವನ್ನು ಯಾರು ಚೆಲ್ಲಬಾರದು ಎಂದು ಜಗಳೂರು ತಾಲ್ಲೂಕಿನ ಕಣ್ವಕುಪ್ಪೆ ಗವಿಮಠದ ಪೀಠಾಧ್ಯಕ್ಷರಾದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಗುಂಡುಮುಣುಗು ಗ್ರಾಮದಲ್ಲಿ ಗುರುವಾರ ಏರ್ಪಡಿಸಿದ್ದ ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಒಬ್ಬ ರೈತ ಬೆವರು ಸುರಿಸಿ ಬೆಳೆದ ಬೆಳೆಯನ್ನು ತಂದು ಅಡುಗೆ ಮಾಡಿ, ಅದನ್ನು ಸಂಪೂರ್ಣವಾಗಿ ಊಟ ಮಾಡಿದಾಗ ಮಾತ್ರ ರೈತರ ಬೆವರು ಒರೆಸಿದ ಪುಣ್ಯ ಪ್ರತಿಯೊಬ್ಬರಿಗೂ ಸಿಗುತ್ತದೆ. ಅಕಸ್ಮಿಕವಾಗಿ ಅನ್ನ ಚೆಲ್ಲವುದು ಬೇರೆ. ಆದರೆ ತಟ್ಟೆಯೊಳಗೆ ಅನ್ನ ಬಿಟ್ಟು ಚೆಲ್ಲವುದು ಒಂದು ಪ್ಯಾಷನ್ ಎನ್ನುವುದಾದರೆ ಅದು ದೊಡ್ಡ ಪಾಪದ ಕೆಲಸವಾಗಿದೆ. ಹಸಿವಾದಾಗ ಅನ್ನ ಸಿಗದೇ ಇದ್ದರೆ ನೋವಾಗುತ್ತದೆ. ಬಂಗಾರ, ಹಣ ತಿನ್ನಲು ಬರುವುದಿಲ್ಲ. ಅದ್ದರಿಂದ ಅನ್ನಕ್ಕೆ ಹಾಗೂ ಮಾನವೀಯತೆಗೆ ನಾವು ಬೆಲೆ ಕೊಡಬೇಕಾಗಿದೆ ಎಂದರು.

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುಂಡುಮುಣುಗು ಕೆ. ತಿಪ್ಪೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ದಾರುಕೇಶ್, ಉದ್ಯಮಿ ಸುನಿಲ್ ಗುಪ್ತ, ಮಾಜಿ ಶಾಸಕ ಚಂದ್ರಶೇಖರಯ್ಯ, ಬ್ಯಾಂಕ್ ನಿರ್ದೆಶಕರಾದ ಮೂಕಯ್ಯಸ್ವಾಮಿ, ಎರ್ರಿಸ್ವಾಮಿ, ನವೀನ್ ರೆಡ್ಡಿ, ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಮಾರಗೌಡ, ನರಸಿಂಹಗಿರಿ ವೆಂಕಟೇಶ್, ಮಂಜುನಾಥ, ಎಂಜನಿಯರ್ ಕೆ. ನಾಗನಗೌಡ, ಜಗದೀಶ್, ಎಚ್. ರೇವಣ್ಣ ಹಾಗೂ ಗ್ರಾಮದ ಪ್ರಮುಖರು ಪಾಲ್ಗೊಂಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.