ADVERTISEMENT

ಕುಮಾರಸ್ವಾಮಿ ಪಾದಗಟ್ಟೆಯ ಗುಡ್ಡ ಕುಸಿತ: ಆತಂಕಗೊಂಡ ಜನ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 4:04 IST
Last Updated 29 ಜುಲೈ 2025, 4:04 IST
ಸಂಡೂರಿನ ಕುಮಾರಸ್ವಾಮಿ ದೇವಸ್ಥಾನದ ಬಳಿಯ ಕುಮಾರಸ್ವಾಮಿ ಪಾದಗಟ್ಟೆಯ ಗುಡಿಯ ಗುಡ್ಡವು ಕುಸಿದಿರುವುದು 
ಸಂಡೂರಿನ ಕುಮಾರಸ್ವಾಮಿ ದೇವಸ್ಥಾನದ ಬಳಿಯ ಕುಮಾರಸ್ವಾಮಿ ಪಾದಗಟ್ಟೆಯ ಗುಡಿಯ ಗುಡ್ಡವು ಕುಸಿದಿರುವುದು    

ಸಂಡೂರು: ತಾಲ್ಲೂಕಿನ ಕುಮಾರಸ್ವಾಮಿ ದೇವಸ್ಥಾನದ ಬಳಿಯ ಕುಮಾರಸ್ವಾಮಿ ಪಾದಗಟ್ಟೆ ಗುಡಿಯ ಮುಂದಿನ ಗುಡ್ಡವು ಈಚೆಗೆ ಕುಸಿದಿದ್ದರಿಂದ ಜನರು ಹೆಚ್ಚಿನ ಆತಂಕಕ್ಕೆ ಒಳಗಾಗಿದ್ದಾರೆ.

ಸ್ವಾಮಿಯ ಪಾದಗಟ್ಟೆಯ ಗುಡಿಯ ಸ್ಥಳವು ಗಣಿಗಾರಿಕೆಯ ಸ್ಥಳದಿಂದ 400 ಮೀಟರ್‌ ಅಂತರದ, ಕೂಗಳತೆ ದೂರದಲ್ಲಿರುವುದರಿಂದ ಗಣಿಗಾರಿಕೆಯ ಬ್ಲಾಸ್ಟ್‍ನಿಂದ ನಡುಗಿ ಕುಸಿದಿರಬಹುದು ಅಥವಾ ಈಚೆಗೆ ಸುರಿದ ನಿರಂತರ ಮಳೆಗೆ ಕುಸಿದಿರಬಹದು ಎಂದು ಜನರು ಶಂಕಿಸಿದ್ದಾರೆ.

ಜನ ಸಂಗ್ರಾಮ ಪರಿಷತ್ ರಾಜ್ಯ ಅಧ್ಯಕ್ಷ ಟಿ.ಎಂ.ಶಿವಕುಮಾರ್ ಮಾತನಾಡಿ, ‘ಸಂಡೂರಿನ ಆರಾಧ್ಯ ದೈವ ಕುಮಾರಸ್ವಾಮಿ ದೇವಸ್ಥಾನದ ಬಳಿಯಲ್ಲಿನ ಸ್ವಾಮಿಯ ಪಾದಗಟ್ಟೆ ಗುಡಿಯ ಮುಂದಿನ ಗುಡ್ಡವು ನಿರಂತರ ಗಣಿಕಾರಿಕೆಯ ಬ್ಲಾಸ್ಟ್ ನಿಂದ ಭೂಮಿ ಕಂಪಿಸಿ ಕುಸಿದಿರಬಹುದು. ಈ ಭಾಗದಲ್ಲಿ ಈಚೆಗೆ ನಿರಂತರವಾಗಿ ಮಳೆ ಸುರಿಯುತ್ತೀರುವುದರಿಂದ ತಂಪು ಹೆಚ್ಚಾಗಿ ಭೂಮಿ ಕುಸಿದಿರಬಹುದು. ಸಂಬಂಧಪಟ್ಟ ಇಲಾಖೆಯವರು ಗಣಿಕಾರಿಯ ಬಗ್ಗೆ ಸೂಕ್ತ ಕ್ರಮವಹಿಸಿ ಪಾದಗಟ್ಟೆಯ ಗುಡಿಯನ್ನು ಸಂರಕ್ಷಣೆ ಮಾಡಲು ಮುಂದಾಗಬೇಕು. ಕುಮಾರಸ್ವಾಮಿ ದೇವಸ್ಥಾನದ ಬಳಿಯಲ್ಲಿನ ಸಾರಿಗೆ ಬಸ್ ನಿಲ್ದಾಣದ ಬಳಿ ಈಚೆಗೆ ಗಣಿ ಲಾರಿ ಉರುಳಿ ಬಿದ್ದಿದ್ದು, ಜನರ ಜೀವದ ರಕ್ಷಣೆಯ ದೃಷ್ಟಿಯಿಂದ ಲಾರಿಗಳ ಅನಿಯಂತ್ರಿತ ಸಂಚಾರವನ್ನು ಸಾರಿಗೆ, ಪೊಲೀಸ್ ಇಲಾಖೆಯವರು ಸೂಕ್ತ ಕಟ್ಟುನಿಟ್ಟಿನ ಕ್ರಮವಹಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.