ADVERTISEMENT

ಕುರುಗೋಡು: ಸಂಭ್ರಮದ ಮಾರೆಮ್ಮದೇವಿ ಕುಂಭೋತ್ಸವ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2025, 14:00 IST
Last Updated 10 ಏಪ್ರಿಲ್ 2025, 14:00 IST
ಕುರುಗೋಡು ತಾಲ್ಲೂಕಿನ ಕೆರೆಕೆರೆ ಗ್ರಾಮದಲ್ಲಿ ಮಾರೆಮ್ಮದೇವಿ ಹಾಗೂ ಸುಂಕ್ಲಮ್ಮದೇವಿ ಕುಂಭೋತ್ಸವ ಬುಧವಾರ ಸಂಭ್ರಮದಿಂದ ಜರುಗಿತು
ಕುರುಗೋಡು ತಾಲ್ಲೂಕಿನ ಕೆರೆಕೆರೆ ಗ್ರಾಮದಲ್ಲಿ ಮಾರೆಮ್ಮದೇವಿ ಹಾಗೂ ಸುಂಕ್ಲಮ್ಮದೇವಿ ಕುಂಭೋತ್ಸವ ಬುಧವಾರ ಸಂಭ್ರಮದಿಂದ ಜರುಗಿತು   

ಕುರುಗೋಡು: ತಾಲ್ಲೂಕಿನ ಕೆರೆಕೆರೆ ಗ್ರಾಮದಲ್ಲಿ ಮಾರೆಮ್ಮದೇವಿ ಹಾಗೂ ಸುಂಕ್ಲಮ್ಮದೇವಿ ಕುಂಭೋತ್ಸವ ಬುಧವಾರ ಸಂಭ್ರಮದಿಂದ ಜರುಗಿತು.

ಕುಂಭೋತ್ಸವದ ಅಂಗವಾಗಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಧಾರ್ಮಿಕ ವಿಧಿವಿವಿಧಾನಗಳು ಜರುಗಿದವು.

ಐದು ವರ್ಷಕ್ಕೊಮ್ಮೆ ಜರುಗುವ ಕುಂಭೋತ್ಸವದ ಅಂಗವಾಗಿ ಮಾರೆಮ್ಮದೇವಿ ಹಾಗೂ ಸುಂಕ್ಲಮ್ಮದೇವಿಯರ ಉತ್ಸವಮೂರ್ತಿ ಮೆರವಣಿಗೆ ಜರುಗಿತು. ದೇವಸ್ಥಾನದ ಆವರಣದಿಂದ ಆರಂಭಗೊಂಡ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಸ್ಥಾನದ ಆವರಣದಲ್ಲಿ ಸಮಾವೇಶಗೊಂಡಿತು.

ADVERTISEMENT

ಡೊಳ್ಳು, ಸಮಾಳ, ತಾಸಿರಾಮ್, ರಾಮ್ ಡೋಲ್, ಪೂರ್ಣಕುಂಭ ಮತ್ತು ಕಳಸ ಭಾಗವಹಿಸಿ ಮೆರವಣಿಗೆಯ ಮೆರುಗು ಹೆಚ್ಚಿಸಿದವು. ಕುರುಗೋಡು, ಕೆರೆಕೆರೆ, ಕಲ್ಲುಕಂಬ, ಬಾದನಹಟ್ಟಿ, ಮುಷ್ಟಗಟ್ಟೆ, ಗೆಣಿಕೆಹಾಳು, ಕುರುಗೋಡು, ಸೋಮಲಾಪುರ, ಕ್ಯಾದಿಗೆಹಾಳು, ಎಮ್ಮಿಗನೂರು, ಕಂಪ್ಲಿ. ಲಕ್ಷಿಪುರ, ಶ್ರೀನಿವಾಸಕ್ಯಾಂಪು, ರ‍್ವಾಯಿ-ಗುತ್ತಿಗನೂರು ಗ್ರಾಮಗಳ ಜನರು ಭಾಗವಹಿಸಿದ್ದರು. ಅಹಿತಕರ ಘಟನೆ ಜರುಗದಂತೆ ಸಿಪಿಐ ವಿಶ್ವನಾಥ ಕೆ. ಹಿರೇಗೌಡರ್, ಪಿಎಸ್‌ಐ ಸುಪ್ರೀತ್‌ ವಿರೂಪಾಕ್ಷಪ್ಪ ಮತ್ತು ಸಿಬ್ಬಂದಿ ಬಿಗಿ ಭದ್ರತೆ ಕೈಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.