ಬಳ್ಳಾರಿ: ಶೇ 75ರಷ್ಟು ಹಾಜರಾತಿ ಪ್ರಮಾಣ ಇರದ ಕಾರಣ ಎಲ್‌ಎಲ್‌ಎಂ ಮೊದಲ ಮತ್ತು ಎರಡನೇ ಸೆಮಿಸ್ಟರ್‌ನ ಬಹುತೇಕ ವಿದ್ಯಾರ್ಥಿಗಳನ್ನು ಬಳ್ಳಾರಿಯ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಪರೀಕ್ಷೆಗೆ ನಿರ್ಬಂಧಿಸಿದೆ.
ನಿಯಮಗಳ ಪ್ರಕಾರ, ಶೇ 75ರಷ್ಟು ಹಾಜರಾತಿ ಪ್ರಮಾಣವಿದ್ದರಷ್ಟೇ ಪರೀಕ್ಷೆಗೆ ಅವಕಾಶವಿದೆ. ಆದರೆ, ಮೊದಲ ಸೆಮಿಸ್ಟರ್‌ನ 33 ವಿದ್ಯಾರ್ಥಿಗಳಲ್ಲಿ ಒಬ್ಬರಿಗೆ, ಎರಡನೇ ಸೆಮಿಸ್ಟರ್‌ನ 40 ವಿದ್ಯಾರ್ಥಿಗಳಲ್ಲಿ 7 ಜನಕ್ಕೆ ಮಾತ್ರ ನಿಗದಿತ ಹಾಜರಾತಿ ಇತ್ತು. ಇದನ್ನು ಗಮನಿಸಿದ ಕುಲಪತಿ ಪ್ರೊ. ಮುನಿರಾಜು ಹಾಜರಾತಿ ಇಲ್ಲದ ವಿದ್ಯಾರ್ಥಿಗಳಿಗೆ ಪರೀಕ್ಷೆ ಅವಕಾಶ ನೀಡಬಾರದು ಎಂದು ವಿಭಾಗದ ಮುಖ್ಯಸ್ಥರಿಗೆ ಸೂಚಿಸಿದ್ದರು. ಅದರಂತೆ ಏಪ್ರಿಲ್ 9 ಮತ್ತು 11ರಂದು ಪರೀಕ್ಷೆ ಬರೆಯಲು 8 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಯಿತು.
‘ಎಲ್‌ಎಲ್‌ಎಂನಲ್ಲಿ ವಿದ್ಯಾರ್ಥಿಗಳು ನಿರಂತರ ಗೈರಾಗುತ್ತಿರುವುದು ಗೊತ್ತಾಯಿತು. ಕಾನೂನು ಅಭ್ಯಾಸ ಮಾಡುವವರೇ ಹೀಗೆ ಮಾಡಿದರೆ ಹೇಗೆ? ಆದ್ದರಿಂದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗಿದೆ. ವಿಶ್ವವಿದ್ಯಾಲಯ ಮತ್ತು ವಿದ್ಯಾರ್ಥಿಗಳ ದೃಷ್ಟಿಯಿಂದ ಇದು ಅನಿವಾರ್ಯ’ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಮುನಿರಾಜು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.