ADVERTISEMENT

ಕಂಪ್ಲಿ: ಬೋನಿಗೆ ಬಿದ್ದ ನರಭಕ್ಷಕ ಚಿರತೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2018, 4:58 IST
Last Updated 21 ಡಿಸೆಂಬರ್ 2018, 4:58 IST
   

ಕಂಪ್ಲಿ (ಬಳ್ಳಾರಿ ಜಿಲ್ಲೆ): ತಾಲ್ಲೂಕಿನ ಸೋಮಲಾಪುರ ಗ್ರಾಮದಲ್ಲಿ ಎರದಮಟ್ಟಿ ಪ್ರದೇಶದಲ್ಲಿ ಅಳವಡಿಸಿದ್ದ ಬೋನ್‌ಗೆಶುಕ್ರವಾರ ಬೆಳಿಗಿನ ಜಾವ ಚಿರತೆ ಸೆರೆಯಾಗಿದೆ. ಮೂರು ವರ್ಷದ ಬಾಲಕನ ವೆಂಕಟಸ್ವಾಮಿಯನ್ನು ಡಿ.11ರಂದು ಬಲಿ ಪಡೆದಿದ್ದ ಚಿರತೆ 11 ದಿನದಿಂದ ಬೋನ್‌ಗೆ ಬೀಳದೆ ತಪ್ಪಿಸಿಕೊಂಡು ಓಡಾಡುತ್ತಿತ್ತು.

ಚಿರತೆ ಚಲನವಲನ ಇರುವ ಸೋಮಲಾಪುರ ಮತ್ತು ಹಳೇದರೋಜಿ ಎರದಮಟ್ಟಿ, ದೇವಲಾಪುರ ಕಾನಮಟ್ಟಿಯಲ್ಲಿ ಚಿರತೆ ಸೆರೆಗಾಗಿ ಅರಣ್ಯ ಇಲಾಖೆ ಏಳು ಬೋನುಗಳನ್ನು ಇಟ್ಟಿದ್ದರು. ಜತೆಗೆ ಮೂರು ಡಿಜಿಟಲ್‌ ಟ್ರ್ಯಾಪ್‌ ಕ್ಯಾಮೆರಾ, ಡ್ರೋನ್‌ ಕ್ಯಾಮೆರಾ ಮತ್ತು ಎರದಮಟ್ಟಿಯಲ್ಲಿ ಗ್ರಾಮಸ್ಥರೊಂದಿಗೆ ಕೋಂಬಿಂಗ್‌ ಕಾರ್ಯಾಚರಣೆಯನ್ನೂ ನಡೆಸಿದ್ದರು. ಇಷ್ಟೆಲ್ಲ ಸತತ ಪ್ರಯತ್ನ ನಂತರ ಚಿರತೆ ಸೆರೆಯಾಗಿದೆ.

ಚಿರತೆ ಸೆರೆಯಾದ ವಿಚಾರ ಗ್ರಾಮ ಮತ್ತು ಸುತ್ತಲಿನ ಹಳ್ಳಿಗಳಲ್ಲಿ ವ್ಯಾಪಿಸುತ್ತಿದ್ದಂತೆ ನೋಡಲು ಭಾರಿ ಜನಸ್ತೋಮವೇ ನೆರದಿತ್ತು. ಚಿರತೆ ಸೆರೆಯಿಂದ ಮೃತ ಬಾಲಕನ ಕುಟುಂಬ ಮತ್ತು ಗ್ರಾಮಸ್ಥರು ನೆಮ್ಮದಿ ನಿಟ್ಟಸಿರು ಬಿಟ್ಟಿದ್ದಾರೆ. ಚಿರತೆ ಎಲ್ಲಿಗೆ ಸಾಗಿಸಲಾಗುತ್ತದೆ ಎನ್ನುವ ವಿಚಾರ ಅಧಿಕಾರಿಗಳು ಸ್ಥಳಕ್ಕೆ ಬಂದ ನಂತರ ಸ್ಪಷ್ಟವಾಗಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.