ADVERTISEMENT

ಹಂಪಿ ಸಾಲು ಮಂಟಪದಲ್ಲಿ ಚಿರತೆ ಪ್ರತ್ಯಕ್ಷ

​ಪ್ರಜಾವಾಣಿ ವಾರ್ತೆ
Published 8 ಜುಲೈ 2022, 16:43 IST
Last Updated 8 ಜುಲೈ 2022, 16:43 IST

ಹೊಸಪೇಟೆ (ವಿಜಯನಗರ): ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನ ಬಳಿಯ ಸಾಲು ಮಂಟಪದಲ್ಲಿ ಗುರುವಾರ ರಾತ್ರಿ ಚಿರತೆ ಕಾಣಿಸಿಕೊಂಡಿದೆ.

ಎದುರು ಬಸವಣ್ಣ ಮಂಟಪ ಬಳಿ ಬೆಟ್ಟಗುಡ್ಡಗಳಿದ್ದು, ಆಗಾಗ ಈ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ, ಈ ಸಲ ಸಾಲು ಮಂಟಪಗಳಲ್ಲಿ ಪ್ರತ್ಯಕ್ಷವಾಗಿರುವುದರಿಂದ ಸ್ಥಳೀಯರು ಆತಂಕಗೊಂಡಿದ್ದಾರೆ. ಈ ವಿಷಯ ಅರಣ್ಯ ಇಲಾಖೆಯವರಿಗೂ ತಿಳಿಸಿದ್ದಾರೆ.

ಹಂಪಿ ಸುತ್ತಮುತ್ತ ಚಿರತೆ, ನವಿಲುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಆಗಾಗ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿರುತ್ತವೆ. ಆದರೆ, ಇದುವರೆಗೆ ಜನರ ಮೇಲೆ ದಾಳಿ ನಡೆದ ನಿದರ್ಶನಗಳಿಲ್ಲ. ಹಂಪಿಯಲ್ಲಿ ದಿನವಿಡೀ ಎಲ್ಲೆಡೆ ಪ್ರವಾಸಿಗರು ಓಡಾಡುತ್ತ ಇರುತ್ತಾರೆ. ಕತ್ತಲಾಗುತ್ತಿದ್ದಂತೆ ಎಲ್ಲೆಡೆ ಮೌನ ಆವರಿಸಿಕೊಳ್ಳುತ್ತದೆ. ಆಗ ಪ್ರಾಣಿಗಳು ಮುಕ್ತವಾಗಿ ಓಡಾಡಿಕೊಂಡಿರುತ್ತವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.