ADVERTISEMENT

ಕೊಡಲಿ ಹಿಡಿದು ಮನೆಗೆ ನುಗ್ಗಿದ ವ್ಯಕ್ತಿ: ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 16:28 IST
Last Updated 30 ಜೂನ್ 2025, 16:28 IST
ಎಫ್‌ಐಆರ್‌ (ಪ್ರಾತಿನಿಧಿಕ ಚಿತ್ರ)
ಎಫ್‌ಐಆರ್‌ (ಪ್ರಾತಿನಿಧಿಕ ಚಿತ್ರ)   

ಬಳ್ಳಾರಿ: ಬಳ್ಳಾರಿ ನಗರದ ಹೊರ ವಲಯದ ಕಪ್ಪಗಲ್ಲು ಗ್ರಾಮದಲ್ಲಿ ಜಮೀನು ವಿಷಯಕ್ಕೆ ವ್ಯಕ್ತಿಯೊಬ್ಬ ಕೊಡಲಿ ಹಿಡಿದು ಮನೆಯೊಂದಕ್ಕೆ ನುಗ್ಗಿ ದಾಂಧಲೆ ಮಾಡಿ ನಿಂದಿಸಿದ್ದಾನೆ. ಘಟನೆ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ದೇವಣ್ಣ ಎಂಬುವವರ ವಿರುದ್ಧ ಪೊಲೀಸರು ಎಫ್‌ಐಆರ್ ಮಾಡಿದ್ದಾರೆ. ದೇವಣ್ಣ ದಾಂಧಲೆ ಮಾಡುತ್ತಿರುವ ವಿಡಿಯೊಗಳು ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. 

ದೂರುದಾರರಾದ ರಾಮಾಂಜಿನೇಯಲು ಮತ್ತು ಜಾನಕಿರಾಮಯ್ಯ ಎಂಬುವರು ಭಾನುವಾರ ಬೆಳಗ್ಗೆ ತಮ್ಮ ಹೊಲಕ್ಕೆ ಹೋಗಿದ್ದರು. ಈ ವೇಳೆ ಆರೋಪಿ ದೇವಣ್ಣನ ಕಡೆಯವರು ಜಾನಕಿರಾಮಯ್ಯ ಅವರ ಹೊಲಕ್ಕೆ ಹೋಗುವ ರಸ್ತೆಯನ್ನು ಟಿಲ್ಲರ್‌ನಿಂದ ನಾಶ ಮಾಡಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ದೇವಣ್ಣನು ರಾಮಾಂಜಿನೇಯಲು ಮನೆಗೆ ಕೊಡಲಿ ಹಿಡಿದು ನುಗ್ಗಿ ಗಲಾಟೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.