ಕುರುಗೋಡು: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರ ಮೇಲೆ ಶೂ ಎಸೆದ ಘಟನೆಯನ್ನು ವಿರೋಧಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ರಾಷ್ಟ್ರಪತಿಗೆ ಬರೆದ ಮನವಿಯನ್ನು ಇಲ್ಲಿನ ಗ್ರೇಡ್– 2 ತಹಶೀಲ್ದಾರ್ ಮಲ್ಲೇಶಪ್ಪ ಅವರಿಗೆ ಗುರುವಾರ ಸಲ್ಲಿಸಿದರು.
‘ಜಾತಿವಾದಿ, ಮನುವಾದಿ, ಕೋಮುವಾದಿ ವಿಚಾರಗಳನ್ನು ಉತ್ತೇಜಿಸುವ ಬಿಜೆಪಿ ಮುಖ್ಯಮಂತ್ರಿಗಳು, ಸಚಿವರು ಮತ್ತು ಮುಖಂಡರ ಇತ್ತೀಚಿನ ಹೇಳಿಕೆಗಳು ಇಂಥ ಕೃತ್ಯಗಳಿಗೆ ಧೈರ್ಯತುಂಬಿವೆ. ಇಂಥ ಘಟನೆಗಳು ಸಮಾಜದ ಸ್ವಾಸ್ಥ್ಯ ಕೆಡಿಸುತ್ತವೆ’ ಎಂದು ಮುಖಂಡರು ಆರೋಪಿಸಿದರು.
ಮುಖಂಡರಾದ ಟಿ.ಸಿದ್ದಪ್ಪ, ವಿ.ಎಸ್. ಶಿವಶಂಕರ್, ಗಾಳಿ ಬಸವರಾಜ, ಅಮೀನ್ ಸಾಬ್, ಯು.ಶಂಕ್ರಪ್ಪ, ಎ.ಮಂಜುನಾಥ ಮತ್ತು ಎಸ್.ರಾಮಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.