ಹೂವಿನಹಡಗಲಿ ತಾಲ್ಲೂಕಿನ ಹೊಳಗುಂದಿ ಗ್ರಾಮದ ರೈತರೊಬ್ಬರ ಹೊಲದಲ್ಲಿನ ಮೆಕ್ಕೆಜೋಳ ಬೆಳೆಯ ಆಯ್ದ ಭಾಗವನ್ನು ಕಿಡಿಗೇಡಿಗಳು ಮಂಗಳವಾರ ಬೆಳಗಿನಜಾವ ಕತ್ತರಿಸಿ ನಾಶಪಡಿಸಿದ್ದಾರೆ.
ಗ್ರಾಮದಿಂದ ಹಿರೇಮಲ್ಲನಕೆರೆಗೆ ತೆರಳುವ ಮಾರ್ಗದಲ್ಲಿರುವ ಮೆಳ್ಳಿ ಹಾಲವ್ವ ಎಂಬುವವರ ಹೊಲದಲ್ಲಿ ಕಿಡಿಗೇಡಿಗಳು ದುಷ್ಕೃತ್ಯ ನಡೆಸಿದ್ದಾರೆ.
‘ನಮ್ಮ ಹೊಲದಲ್ಲಿ ಮೆಕ್ಕೆಜೋಳ ಹುಲುಸಾಗಿ ಬೆಳೆದಿತ್ತು. ಬದುವಿನ ಪಕ್ಕದ 20 ಸೆಂಟ್ಸ್ ನಲ್ಲಿನ ಬೆಳೆಯನ್ನು ಕತ್ತರಿಸಿ ಹಾಕಿದ್ದಾರೆ. ಯಾವುದೋ ಸಿಟ್ಟನ್ನು ಈ ರೀತಿ ತೀರಿಸಿಕೊಳ್ಳುವವರಿಗೆ ಒಳ್ಳೆಯದಾಗಲ್ಲ. ಯಾವ ರೈತರಿಗೂ ಈ ರೀತಿ ಆಗಬಾರದು’ ಎಂದು ರೈತ ಮಹಿಳೆ ಹಾಲವ್ವ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.