ADVERTISEMENT

ಬಳ್ಳಾರಿ: ಮೋದಪಲ್ಲಿ ರಾಜೇಶ್ವರಿ ಸುಬ್ಬರಾಯುಡು ನೂತನ ಮೇಯರ್

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2022, 8:32 IST
Last Updated 19 ಮಾರ್ಚ್ 2022, 8:32 IST
ಮೋದಪಲ್ಲಿ ರಾಜೇಶ್ವರಿ
ಮೋದಪಲ್ಲಿ ರಾಜೇಶ್ವರಿ   

ಬಳ್ಳಾರಿ: ನಗರದ ಮಹಾನಗರ ಪಾಲಿಕೆಯ ಅಧಿಕಾರದ ಗದ್ದುಗೆಯನ್ನು ಕಾಂಗ್ರೆಸ್ ವಶಪಡಿಸಿಕೊಂಡಿದ್ದು, ಮೇಯರ್‌ ಆಗಿ 34ನೇ ವಾಡ್೯ನ ಕಾಂಗ್ರೆಸ್ ಸದಸ್ಯೆ ಎಂ.ರಾಜೇಶ್ವರಿ ಸುಬ್ಬರಾಯುಡು, ಉಪಮೇಯರ್ ಆಗಿ 37ನೇ ವಾಡ್೯ನ ಮಾಲನ್ ಬೀ ಶನಿವಾರ ಆಯ್ಕೆಯಾಗಿದ್ದಾರೆ.

ಪಾಲಿಕೆಯ ಒಟ್ಟು 39ವಾಡ್೯ಗಳಲ್ಲಿ ಕಾಂಗ್ರೆಸ್‌ 21, ಬಿಜೆಪಿಯ 13, ಐವರು ಪಕ್ಷೇತರ ಸದಸ್ಯರು ಗೆಲುವು ಸಾಧಿಸಿದ್ದರು. ಪಾಲಿಕೆ ಚುನಾವಣೆ ನಡೆದು 11ತಿಂಗಳ ಬಳಿಕ ಮೇಯರ್, ಉಪಮೇಯರ್ ಆಯ್ಕೆ ಚುನಾವಣೆ ಎರಡು ಬಾರಿ ಮುಂದೂಡಲಾಗಿತ್ತು. ಈಗ ಬದಲಾದ ಮೀಸಲಾತಿಯೊಂದಿಗೆ ಮೇಯರ್ ಮತ್ತು ಉಪಮೇಯರ್ ಸೇರಿ ನಾಲ್ಕು ಸ್ಥಾಯಿ ಸಮಿತಿಗಳಿಗೆಚುನಾವಣೆ ನಡೆಯಿತು.

ಕಾಂಗ್ರೆಸ್‌ನಿಂದ ಮೇಯರ್ ಸ್ಥಾನಕ್ಕೆ ರಾಜೇಶ್ವರಿ, ಉಪಮೇಯರ್ ಸ್ಥಾನಕ್ಕೆ ಮಾಲನ್ ಬೀ ಹಾಗೂ ಬಿಜೆಪಿಯಿಂದ ಮೇಯರ್ ಗೆ ಸುರೇಖಾ ಮಲ್ಲನಗೌಡ, ಉಪಮೇಯರ್ ಗೆ ಗೋವಿಂದರಾಜಲು ನಾಮಪತ್ರ ಸಲ್ಲಿಸಿದ್ದರು. 21ಪಕ್ಷದ ಹಾಗೂ ಐವರು ಪಕ್ಷೇತರ ಸದಸ್ಯರೊಂದಿಗೆ ಪಾಲಿಕೆಯ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ.

ADVERTISEMENT

ಕಳೆದ ಮೂರು ದಿನಗಳಿಂದ ಕಾಂಗ್ರೆಸ್ ಪಕ್ಷ ತನ್ನ ಸದಸ್ಯರನ್ನು ಹಿಡಿದಿಟ್ಟುಕೊಳ್ಳಲು ರೆಸಾರ್ಟ್‌ಗೆ ಕರೆದೊಯ್ಯಲಾಗಿತ್ತು. ಶನಿವಾರ ನಡೆಯುವ ಚುನಾವಣೆಗೆ ನೇರವಾಗಿ ಬಂದು ಪಾಲ್ಗೊಂಡಿದ್ದಾರೆ. ಚುನಾವಣಾ ಅಧಿಕಾರಿಯಾಗಿ ಕಲಬುರಗಿ ಪ್ರಾದೇಶಿಕ ಆಯುಕ್ತ ಎನ್.ವಿ.ಪ್ರಸಾದ್ ಕಾರ್ಯನಿರ್ವಹಿಸಿದರು. ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ, ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್, ಎಡಿಸಿ ಮಂಜುನಾಥ, ಶಾಸಕರಾದ ಬಿ.ನಾಗೇಂದ್ರ, ಜಿ.ಸೋಮಶೇಖರ್ ರೆಡ್ಡಿ, ರಾಜ್ಯ ಸಭಾ ಸದಸ್ಯ ನಾಸೀರ್ ಹುಸೇನ್, ಎಂಎಲ್ಸಿ ಅಲ್ಲಂ ವೀರಭದ್ರಪ್ಪ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.