ಹರಪನಹಳ್ಳಿ: ತಾಲ್ಲೂಕಿನ ಚಿಗಟೇರಿ ಗ್ರಾಮದ ನಾರದಮುನಿ ಸಮುದಾಯ ಭವನದಲ್ಲಿ ಭಾನುವಾರ ನಮ್ಮನಡೆ ಆರೋಗ್ಯದೆಡೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಜರುಗಿತು.
ದಾವಣಗೆರೆ ಎಸ್.ಎಸ್.ಕೇರ್ ಟ್ರಸ್ಟ್, ಜೆ.ಜೆ.ಎಂ.ಮಹಾವಿದ್ಯಾಲಯ, ಬಾಪೂಜಿ ಆಸ್ಪತ್ರೆ ಸಹಯೋಗದಲ್ಲಿ ಜರುಗಿದ ಆರೋಗ್ಯ ಮೇಳವನ್ನು ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಉದ್ಘಾಟಿಸಿ ಮಾತನಾಡಿದರು.
ಪ್ರತಿದಿನ ಕನಿಷ್ಠ 30 ನಿಮಿಷ ನಡೆದರೂ ಸಾಕು. ಯೋಗ ಮತ್ತು ಪ್ರಾಣಾಯಾಮ ದೇಹ-ಮನಸ್ಸಿಗೆ ಶಾಂತಿ ಮತ್ತು ಶಕ್ತಿ ನೀಡುತ್ತವೆ. ಪ್ರತಿದಿನ 7-8 ಗಂಟೆಗಳ ನಿದ್ರೆ ದೇಹಕ್ಕೆ ಹೊಸ ಶಕ್ತಿ ನೀಡುತ್ತದೆ. ಮೊಬೈಲ್ ಮತ್ತು ಟಿವಿ ಸಮಯವನ್ನು ನಿದ್ರೆಗೆ ಅಡ್ಡಿಯಾಗದಂತೆ ನಿಯಂತ್ರಿಸಬೇಕು ಎಂದರು.
ಧ್ಯಾನ, ಓದು, ಸಂಗೀತ, ಪ್ರಾರ್ಥನೆ ಇವುಗಳು ಮನಸ್ಸಿಗೆ ಶಾಂತಿ ತರುತ್ತವೆ. ಒತ್ತಡ ನಿಯಂತ್ರಿಸಲು ಸಕಾರಾತ್ಮಕ ಚಿಂತನೆ ಬೆಳೆಸಬೇಕು. ಸಾಕಷ್ಟು ನೀರು ಕುಡಿಯಬೇಕು. ವೈಯಕ್ತಿಕ ಮತ್ತು ಪರಿಸರದ ಸ್ವಚ್ಛತೆ ಆರೋಗ್ಯದ ಮೂಲ ಎಂದು ಸಲಹೆ ನೀಡಿದರು.
ಚಿಗಟೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ್, ಉಪಾಧ್ಯಕ್ಷೆ ಹಾಲಮ್ಮ, ಡಾ.ಮೂಗನಗೌಡ್ರು, ಡಾ.ವಿನಯ್ ಬೇಂದ್ರೆ, ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಕುಬೇರಪ್ಪ, ಹರಪನಹಳ್ಳಿ ಬ್ಲಾಕ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ , ಒ.ರಾಮಪ್ಪ, ಟಿ.ವೆಂಕಟೇಶ್, ಎಚ್.ವಸಂತಪ್ಪ, ಟಿ.ವೆಂಕಟೇಶ, ಮುತ್ತಿಗಿ ಜಂಬಣ್ಣ, ಮಂಜುನಾಥ, ಮಲ್ಲಿಕಾರ್ಜುನ ಗೌಡ, ದೇವೇಂದ್ರ ಗೌಡ, ಐ.ಸಲಾಂ ಸಾಬ್ ಇದ್ದರು.
ಇದಕ್ಕೂ ಮುನ್ನ ಅರಸೀಕೆರೆ ಗ್ರಾಮದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಬಸ್ ನಿಲ್ದಾಣ ಕಾಮಗಾರಿ ವೀಕ್ಷಿಸಿ ಮಾತನಾಡಿ, ಬಸ್ ನಿಲ್ದಾಣ ಕಾಮಗಾರಿ ಗುಣಮಟ್ಟ ಕಾಪಾಡಬೇಕು. ಅಕ್ಕಪಕ್ಕದ ಶೆಡ್ ತೆರವುಗೊಳಿಸಲು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.