ಬಳ್ಳಾರಿ: ಬೇಸಿಗೆ ಅವಧಿಯ ಬಿಸಿಲಿನ ಪ್ರದೇಶಗಳಿಗೆ ಅನ್ವಯಿಸುವ ಎರಡು ತಿಂಗಳ ಮಟ್ಟಿಗೆ ಸರ್ಕಾರಿ ಕಚೇರಿಗಳ ಕೆಲಸದ ಸಮಯದ ಬದಲಾವಣೆ ನಿಯಮಕ್ಕೆ ಮೊದಲ ದಿನ ಅಷ್ಟೇನು ಸ್ಪಂದನೆ ಸಿಕ್ಕಿಲ್ಲ.
ಸರ್ಕಾರಿ ಕಚೇರಿಗಳ ವೇಳಾಪಟ್ಟಿಯನ್ನು ಈಗಿರುವ ವೇಳಾಪಟ್ಟಿಗೆ ಬದಲಾಗಿ ಬೆಳಿಗ್ಗೆ 8ರಿಂದ ಮಧ್ಯಾಹ್ನ 1.30ರವರೆಗೆ ಬದಲಾಯಿಸಿ ರಾಜ್ಯ ಸರ್ಕಾರವು ಆದೇಶಿಸಿದೆ. ಆದರೆ, ಹಲವು ಕಚೇರಿಗಳಲ್ಲಿ ಬೆಳಿಗ್ಗೆ 8 ಗಂಟೆಗೆ ಒಬ್ಬರು, ಇಬ್ಬರು ಸಿಬ್ಬಂದಿಯಷ್ಟೇ ಹಾಜರಾಗಿದ್ದರು. ಬಹುತೇಕ ಕಚೇರಿಗಳಲ್ಲಿ ಕೆಳ ಹಂತದ ಸಿಬ್ಬಂದಿ ಕಾಣಸಿಕ್ಕರೇ ಹೊರತು ಅಧಿಕಾರಿಗಳ ಹಾಜರಾತಿ ಕೊರತೆ ಎದ್ದು ಕಾಣುತ್ತಿತ್ತು.
ಬೆಳಿಗ್ಗೆ 8.30ರ ನಂತರವೂ ಅಧಿಕಾರಿಗಳು ಸಿಬ್ಬಂದಿ ಕಚೇರಿಗಳತ್ತ ದೌಡಾಯಿಸುತ್ತಿದ್ದದ್ದು ಕಂಡು ಬಂತು. ಅಲ್ಲಿಯ ವರೆಗೆ ಹೊಸ ಜಿಲ್ಲಾಡಳಿತ ಭವನ ಬಣಗುಡುತ್ತಿತ್ತು.
ಆದರೆ, ಮಧ್ಯಾಹ್ನದ ನಂತರವೂ ಕೆಲವು ಕಡೆ ಕಚೇರಿಗಳಲ್ಲಿ ಸಿಬ್ಬಂದಿ ಕೆಲಸ ಮಾಡುತ್ತಿದ್ದದ್ದೂ ಕಂಡು ಬಂದಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.