ಹೊಸಪೇಟೆ (ವಿಜಯನಗರ): ಲೇಖಕ ಐನಳ್ಳಿ ನವೀನ್ ಬರೆದ ‘ಖಾಲಿ ಬೊಗಸೆ’ ಕಾದಂಬರಿಯನ್ನು ಸೋಮವಾರ ಸಂಜೆ ನಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ನಿಷ್ಠಿ ರುದ್ರಪ್ಪ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ನಿಷ್ಠಿ ರುದ್ರಪ್ಪ, ‘ಜಿಲ್ಲೆಯ ಯುವಕರು ಹೆಚ್ಚೆಚ್ಚೂ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು. ಸಂತ ಶಿಶುನಾಳ ಷರೀಫರ ತತ್ವ ಪದಗಳು ನಮಗೆಲ್ಲ ದಾರಿದೀಪವಾಗಬೇಕು. ‘ಖಾಲಿ ಬೊಗಸೆ’ ಕಾದಂಬರಿ ಹೆಚ್ಚು ಹೆಚ್ಚು ಓದುಗರ ತಲುಪಲಿ. ನಮ್ಮ ಭಾಗದ ಸಾಹಿತಿಗಳಿಗೆ ಹೆಚ್ಚು ಮನ್ನಣೆ ಸಿಗಲಿ’ ಎಂದು ಹೇಳಿದರು.
ಶಿವಮೊಗ್ಗದ ಕಮಲಾ ನೆಹರೂ ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಆರಡಿ ಮಲ್ಲಯ್ಯ ಕಟ್ಟೇರ ಮಾತನಾಡಿ, ‘ಖಾಲಿ ಬೊಗಸೆ’ ಕಾದಂಬರಿ ಬಳ್ಳಾರಿ ಜಿಲ್ಲೆಯ ಭಾಷೆಯಲ್ಲಿ ಬರೆಯಲಾಗಿದೆ. ಅಲೆಮಾರಿ ಜನಾಂಗದ ಚನ್ನದಾಸರ ಬದುಕನ್ನು ಚಿತ್ರಿಸಿರುವ ಕಾದಂಬರಿಯಾಗಿದೆ’ ಎಂದರು.
ಚನ್ನದಾಸರ ಸಮುದಾಯದ ಮುಖಂಡ ಸಿ.ಡಿ. ಮಹಾದೇವ, ಲೇಖಕ ಐನಳ್ಳಿ ನವೀನ್, ವಿಜಯನಗರ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಅಸುಂಡಿ ಬಿ ನಾಗರಾಜ ಗೌಡ, ದುರ್ಗಪ್ಪ ಚನ್ನದಾಸ, ಶಿಕ್ಷಕ ಕೆ. ಬಸವರಾಜ, ಪ್ರಕಾಶ್, ರಾಜಶೇಖರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.