ಕಂಪ್ಲಿ: ತಾಲ್ಲೂಕಿನ ಬಹುತೇಕ ಗ್ರಾಮೀಣ ಭಾಗದಲ್ಲಿ ಭತ್ತ ನಾಟಿಗೆ ಮುನ್ನ ಗದ್ದೆ ಹದಗೊಳಿಸಲು ರೈತರು ಟ್ರ್ಯಾಕ್ಟರ್‌ಗಳಿಗೆ ಕೇಜ್ ವೀಲ್ (ಕಬ್ಬಿಣದ ಚಕ್ರ) ಅಳವಡಿಸಿ ಡಾಂಬರ್ ರಸ್ತೆ ಮೇಲೆ ಓಡಿಸುತ್ತಿದ್ದಾರೆ. ಇದರಿಂದ ರಸ್ತೆ ಬಹುಬೇಗ ಹಾಳಾಗುತ್ತಿವೆ ಎಂದು ಶಾಸಕ ಜೆ.ಎನ್. ಗಣೇಶ್ ಬೇಸರ ವ್ಯಕ್ತಪಡಿಸಿದರು.
ತಾಲ್ಲೂಕಿನ ದೇವಸಮುದ್ರ ಗ್ರಾಮದಲ್ಲಿ ₹ 4.90 ಕೋಟಿ ವೆಚ್ಚದ ದೇವಸಮುದ್ರ-ಚಿಕ್ಕಜಾಯಿಗನೂರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ರಸ್ತೆ ಸುದೀರ್ಘ ಬಾಳಿಕೆಗೆ ರೈತರು ಸಹಕರಿಸಬೇಕು’ ಎಂದು ಮನವಿ ಮಾಡಿದರು.
ದೇವಸಮುದ್ರ ಗ್ರಾಮದಲ್ಲಿ ₹ 50 ಲಕ್ಷ ವೆಚ್ಚದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಿಸುವಂತೆ ಮುಖಂಡ ನಾಯಕರ ವೆಂಕೋಬಾ, ಈಶ್ವರ, ಯುವ ಮುಖಂಡ ಕೋರಿ ಚನ್ನಬಸವರಾಜ ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಯಕರ ಮಾಯಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಶ್ರೀನಿವಾಸರಾವ್, ಪ್ರಮುಖರಾದ ಪಂಪಾಪತಿ, ಕೆ. ಷಣ್ಮುಖಪ್ಪ, ದೊಡ್ಡನಾಯಕ, ಮೌನೇಶ್, ಕೆರೆಕೆರೆ ಅಂಜಯ್ಯ, ಚಾನಾಳ್ ಪಕ್ಕೀರಪ್ಪ, ಕೆ. ಕರಿಯಪ್ಪ, ಎಚ್. ಗುಂಡಪ್ಪ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.