ADVERTISEMENT

ಪುಸ್ತಕ ಪ್ರದರ್ಶನದತ್ತ ಸುಳಿಯದ ಜನ, ನಡೆಯದ ವ್ಯಾಪಾರ

​ಪ್ರಜಾವಾಣಿ ವಾರ್ತೆ
Published 28 ಜನವರಿ 2023, 19:31 IST
Last Updated 28 ಜನವರಿ 2023, 19:31 IST
ಪುಸ್ತಕ ಪ್ರದರ್ಶನದಲ್ಲಿ ಭಾಗವಹಿಸಿದ ಬೆರಳೆಣಿಕೆ ಜನ
ಪುಸ್ತಕ ಪ್ರದರ್ಶನದಲ್ಲಿ ಭಾಗವಹಿಸಿದ ಬೆರಳೆಣಿಕೆ ಜನ   

ಹಂಪಿ (ಹೊಸಪೇಟೆ): ಹಂಪಿ ಉತ್ಸವದ ಅಂಗವಾಗಿ ಪುಸ್ತಕ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಅವುಗಳತ್ತ ಜನರ ಸುಳಿವೇ ಇಲ್ಲ. ಸತತ ಎರಡನೇ ದಿನವೂ ಹೆಚ್ಚಿಗೆ ಜನ ಬರಲಿಲ್ಲ. ಮಳಿಗೆಗಳು ಬಣಗುಡುತ್ತಿದ್ದವು.

ಕೃಷಿ, ಕೈಗಾರಿಕಾ ಪ್ರದರ್ಶನ ಮೇಳದಲ್ಲೂ ಇದೇ ಪರಿಸ್ಥಿತಿ ಇತ್ತು. ಎಐಡಿಎಸ್ಒ ಅವಿಷ್ಕಾರ ಪುಸ್ತಕ ಪ್ರದರ್ಶಕರ ಮಳಿಗೆಯಲ್ಲಿ ವಿಚಾರವಾದಿಗಳು, ಸ್ವಾತಂತ್ರ್ಯ ಹೋರಾಟಗಾರರ, ತತ್ವಜ್ಞಾನಿಗಳ ಪುಸ್ತಕಗಳು, ನೆರಳಕಟ್ಟೆಯ ಆರ್ಯ ಸಮಾಜ, ಮಂಗಳೂರಿನ ವಿವೇಕ ಜಾಗೃತಿ ವೇದಿಕೆ, ಸನಾತನ ಸಂಸ್ಥೆ, ಬಳ್ಳಾರಿಯ ಕೃಷ್ಣಾ ಪ್ರಭಾ ಸಂಘಗಳು ಮಹಾಭಾರತ, ರಾಮಾಯಣ, ಜ್ಯೋತಿಷ್ಯ ಶಾಸ್ತ್ರ ಸೇರಿದಂತೆ ಧಾರ್ಮಿಕ ಪುಸ್ತಕಗಳು ಪ್ರದರ್ಶನದಲ್ಲಿದ್ದವು. ಮಂಗಳೂರಿನ ಶಾಂತಿ ಪ್ರಕಾಶನದಿಂದ ಶಾಂತಿಗಾಗಿ ಸಾಹಿತ್ಯ ಘೋಷವಾಕ್ಯದಡಿ ಕನ್ನಡದಲ್ಲಿ ಕುರಾನ್, ತಪ್ಪು ಕಲ್ಪನೆಗಳು, ಇಸ್ಲಾಂ ಇತಿಹಾಸ ಪುಸ್ತಕಗಳಿದ್ದವು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದ ಪ್ರಕಟಣೆಗಳು ಶೇ 50ರ ರಿಯಾಯಿತಿಯಲ್ಲಿ ಮಾರಾಟಕ್ಕೆ ಇಡಲಾಗಿದೆ.

ಕೃಷಿ ಪ್ರದರ್ಶನದಲ್ಲಿ ಸ್ವಾವಲಂಬಿ ಬದುಕಿಗೆ ಸಮಗ್ರ ಹಾಗೂ ಸುಸ್ಥಿರ ಕೃಷಿ ಮಾದರಿ ಇಡಲಾಗಿತ್ತು. ಪಶು ಸಂಗೋಪನಾ ಇಲಾಖೆಯ ವೆಂಕೋಬ್ ತಳಿಯ ನಾಲ್ಕುವರೆ ಕೆಜಿಯ ಕೋಳಿ, ಅರಣ್ಯ ಇಲಾಖೆಯ ಅರಣ್ಯ ಮಾದರಿ, ಶಿಕ್ಷಣ ಇಲಾಖೆಯ ಕಲಿಕಾ ಮಾದರಿ ಗಮನ ಸೆಳೆದವು. ‘ಪ್ರದರ್ಶನದಲ್ಲಿ ವ್ಯಾಪಾರ ನಡೀತಾ ಇಲ್ಲ. ಪ್ರಯಾಣದ ವೆಚ್ಚ ಭರಿಸುವುದು ಕಷ್ಟವಾಗಲಿದೆ’ ಎಂದು ವ್ಯಾಪಾರಿಗಳು ಗೋಳು ತೋಡಿಕೊಂಡರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.