ADVERTISEMENT

ಬಳ್ಳಾರಿ ಜಿಲ್ಲೆಯಲ್ಲಿ ಬಿರುಗಾಳಿ ಮಳೆಗೆ 70 ಮನೆಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2019, 11:42 IST
Last Updated 30 ಏಪ್ರಿಲ್ 2019, 11:42 IST
ಬಿರುಗಾಳಿ ಮಳೆಗೆ ಕೂಡ್ಲಿಗಿ ತಾಲ್ಲೂಕಿನ ದಿಬ್ಬದಹಳ್ಳಿಯ ಬೊಮ್ಮಣ್ಣ ಎಂಬುವರ ರೇಷ್ಮೆ ಸಾಕಾಣಿಕೆ ಮನೆಯ ಶೀಟುಗಳು ಹಾರಿ ಹೋಗಿರುವುದು
ಬಿರುಗಾಳಿ ಮಳೆಗೆ ಕೂಡ್ಲಿಗಿ ತಾಲ್ಲೂಕಿನ ದಿಬ್ಬದಹಳ್ಳಿಯ ಬೊಮ್ಮಣ್ಣ ಎಂಬುವರ ರೇಷ್ಮೆ ಸಾಕಾಣಿಕೆ ಮನೆಯ ಶೀಟುಗಳು ಹಾರಿ ಹೋಗಿರುವುದು   

ಹೊಸಪೇಟೆ: ಬಳ್ಳಾರಿ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಸುರಿದ ಬಿರುಗಾಳಿ ಮಳೆಗೆ 70 ಮನೆಗಳಿಗೆ ಹಾನಿಯಾಗಿದ್ದು, ಆರು ಜನ ಗಾಯಗೊಂಡಿದ್ದಾರೆ.

ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕಡಲಬಾಳು ಗ್ರಾಮದ 53, ಬ್ಯಾಲಾಳು ಗ್ರಾಮದ ಮೂರು, ಕೂಡ್ಲಿಗಿ ತಾಲ್ಲೂಕಿನ ಗುಡೇಕೋಟೆಯಲ್ಲಿ ಆರು, ದಿಬ್ಬದಹಳ್ಳಿಯಲ್ಲಿ ನಾಲ್ಕು,ಹೂವಿನಹಡಗಲಿಯ ಮುದ್ಲಾಪುರ ತಾಂಡಾದಲ್ಲಿ ನಾಲ್ಕು ಮನೆಗಳಿಗೆ ಹಾನಿಯಾಗಿದೆ. ಹಡಗಲಿ ಪಟ್ಟಣದಲ್ಲಿ ನಾಲ್ಕು ಗುಡಿಸಲು ನಾಶವಾಗಿವೆ.

ಹಗರಿಬೊಮ್ಮನಹಳ್ಳಿತಾಲ್ಲೂಕಿನ ಬನ್ನಿಗೋಳ, ತಂಬ್ರಹಳ್ಳಿಯಲ್ಲಿ ತಲಾ ನಾಲ್ಕು,ಶೀಗೇನಹಳ್ಳಿಯಲ್ಲಿ ಎರಡು ಎಕರೆ ಬಾಳೆ ತೋಟ ಸಂಪೂರ್ಣ ನಷ್ಟವಾಗಿದೆ. ಬ್ಯಾಲಾಳು ಗ್ರಾಮದಲ್ಲಿ ಮನೆ ಕುಸಿದು ಆರು ಜನ ಗಾಯಗೊಂಡಿದ್ದಾರೆ.

ADVERTISEMENT

ಜಿಲ್ಲೆಯ ಸಿರುಗುಪ್ಪ, ಸಂಡೂರು, ಹೊಸಪೇಟೆಯಲ್ಲಿ ತುಂತುರು ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.