ADVERTISEMENT

ತುಂತುರು ಮಳೆ

​ಪ್ರಜಾವಾಣಿ ವಾರ್ತೆ
Published 27 ಮೇ 2019, 12:17 IST
Last Updated 27 ಮೇ 2019, 12:17 IST

ಹೊಸಪೇಟೆ: ನಗರ ಸೇರಿದಂತೆ ತಾಲ್ಲೂಕಿನ ಹಲವೆಡೆ ಭಾನುವಾರ ತಡರಾತ್ರಿ ತುಂತುರು ಮಳೆಯಾಗಿದೆ.

ಬಿರುಗಾಳಿ ಸಮೇತ ವರ್ಷಧಾರೆಯಾಗಿದ್ದರಿಂದ ವಾತಾವರಣ ಸಂಪೂರ್ಣ ತಂಪಾಗಿತ್ತು. ಸೋಮವಾರ ಬೆಳಿಗ್ಗೆ ಒಂಬತ್ತು ಗಂಟೆಯ ವರೆಗೆ ಮಳೆಯ ಹನಿಗಳು ಉದುರುತ್ತಿದ್ದವು. ದಟ್ಟ ಕಾರ್ಮೋಡ ಆವರಿಸಿಕೊಂಡಿತ್ತು. ನಂತರ ಕಾರ್ಮೋಡಗಳು ದೂರವಾಗಿ ಪ್ರಖರವಾದ ಬಿಸಿಲು ಬಂದಿತ್ತು.

ತಾಲ್ಲೂಕಿನ ಕಮಲಾಪುರ, ಹಂಪಿ, ಹೊಸೂರು, ನಾಗೇನಹಳ್ಳಿ, ಸಂಕ್ಲಾಪುರ, ವ್ಯಾಸನಕೆರೆ ಸೇರಿದಂತೆ ಹಲವೆಡೆ ಮಳೆಯಾಗಿರುವುದು ವರದಿಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.