ADVERTISEMENT

ಕಾನಹೊಸಹಳ್ಳಿ | ಉತ್ತಮ ಮಳೆ: 7 ಮನೆಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2024, 15:42 IST
Last Updated 14 ಆಗಸ್ಟ್ 2024, 15:42 IST
ಕಾನಹೊಸಹಳ್ಳಿಯಲ್ಲಿ ಬುಧವಾರ ಸುರಿದ ಮಳೆಯಿಂದಾಗಿ ಮನೆ ಗೋಡೆ ಕುಸಿದಿದ್ದು, ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯ್ತಿ ಅಧ್ಯಕ್ಷ ಚೇತನ್ ಎ.ಸಿ, ಪಿಡಿಒ ವಿನಯ್ ಕುಮಾರ್, ಸದಸ್ಯ ಹೊನ್ನೂರಸ್ವಾಮಿ ಭೇಟಿ ನೀಡಿ ಪರಿಶೀಲಿಸಿದರು
ಕಾನಹೊಸಹಳ್ಳಿಯಲ್ಲಿ ಬುಧವಾರ ಸುರಿದ ಮಳೆಯಿಂದಾಗಿ ಮನೆ ಗೋಡೆ ಕುಸಿದಿದ್ದು, ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯ್ತಿ ಅಧ್ಯಕ್ಷ ಚೇತನ್ ಎ.ಸಿ, ಪಿಡಿಒ ವಿನಯ್ ಕುಮಾರ್, ಸದಸ್ಯ ಹೊನ್ನೂರಸ್ವಾಮಿ ಭೇಟಿ ನೀಡಿ ಪರಿಶೀಲಿಸಿದರು   

ಕಾನಹೊಸಹಳ್ಳಿ: ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ ಬುಧವಾರ ಬೆಳಗಿನ ಜಾವ ಉತ್ತಮ ಮಳೆಯಾಗಿದ್ದು, 7 ಮನೆಗಳಿಗೆ ಹಾನಿಯಾಗಿದೆ.

ಕಾನಹೊಸಹಳ್ಳಿ, ಕೆಂಚಮಲ್ಲನಹಳ್ಳಿ, ಬಯಲುತುಂಬರಗುದ್ದಿ, ಜುಮೋಬನಹಳ್ಳಿ, ಸೂಲದಹಳ್ಳಿ, ಹುಲಿಕೆರೆ, ಎಚ್.ಕೆ ಕುಂಟೆ ಗ್ರಾಮಗಳಲ್ಲಿ ತಲಾ ಒಂದೊಂದು ಮನೆಗಳು ಗೋಡೆ ಸೇರಿದಂತೆ ಚಾವಣಿ ಕುಸಿದಿವೆ ಎಂದು ಕಂದಾಯ ನಿರೀಕ್ಷಕ ಸಿದ್ದಪ್ಪ ತಿಳಿಸಿದ್ದಾರೆ.

ಬುಧವಾದ ಬೆಳಗಿನ‌ ಜಾವ 3ರಿಂದ 6 ರವರೆಗೂ ಬಿಟ್ಟೂ ಬಿಡದೆ ಗುಡುಗು -ಸಿಡಿಲ ಅರ್ಭಟದೊಂದಿಗೆ ನಿರಂತರವಾಗಿ ಮಳೆ ಸುರಿಯಿತು.

ADVERTISEMENT

ಆಲೂರು, ಕಾನಮಡಗು, ಬಯಲುತುಂಬರಗುದ್ದಿ, ದಾಸರೋಬನಹಳ್ಳಿ, ಹಿರೇಕುಂಬಳಗುಂಟೆ, ಬಣವಿಕಲ್ಲು ಸೇರಿದಂತೆ ಹಲವು ಗ್ರಾಮಗಳಲ್ಲಿ ಹಳ್ಳಗಳು ತುಂಬಿ ಹರಿದಿವೆ. ಕಾನಹೊಸಹಳ್ಳಿ 4.2 ಸೆಂ.ಮಿ, ಬಣವಿಕಲ್ಲು 5.1. ಸೆಂ.ಮಿ, ಚಿಕ್ಕಜೋಗಿಹಳ್ಳಿ 5.6 ಸೆಂ.ಮಿ ಮಳೆಯಾಗಿದೆ.

ಕಾನಹೊಸಹಳ್ಳಿ ಸಮೀಪದ ಕಾನಮಡುಗುವಿನಲ್ಲಿ ತುಂಬಿ ಹರಿದ ಹಳ್ಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.