ADVERTISEMENT

ಹೂವಿನಹಡಗಲಿ: ರಾಮಲಿಂಗೇಶ್ವರ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 5:05 IST
Last Updated 27 ಜನವರಿ 2026, 5:05 IST
ಹೂವಿನಹಡಗಲಿ ತಾಲ್ಲೂಕು ಹುಗಲೂರು ಗ್ರಾಮದಲ್ಲಿ ರಾಮಲಿಂಗೇಶ್ವರ ರಥೋತ್ಸವ ಜರುಗಿತು
ಹೂವಿನಹಡಗಲಿ ತಾಲ್ಲೂಕು ಹುಗಲೂರು ಗ್ರಾಮದಲ್ಲಿ ರಾಮಲಿಂಗೇಶ್ವರ ರಥೋತ್ಸವ ಜರುಗಿತು   

ಹೂವಿನಹಡಗಲಿ: ತಾಲ್ಲೂಕಿನ ಹುಗಲೂರು ಗ್ರಾಮದಲ್ಲಿ ಸೋಮವಾರ ರಾಮಲಿಂಗೇಶ್ವರ ರಥೋತ್ಸವ ವಿಜೃಂಭಣೆಯಿಂದ ಜರುಗಿತು.

ಸ್ವಾಮಿಯ ಉತ್ಸವ ಮೂರ್ತಿಯನ್ನು ದೇವಸ್ಥಾನದಿಂದ ಪಲ್ಲಕ್ಕಿಯ ಮೆರವಣಿಗೆಯಲ್ಲಿ ಕರೆ ತಂದು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಬಣ್ಣ ಬಣ್ಣದ ಪಟ, ಹೂಮಾಲೆ, ತೋರಣಗಳಿಂದ ಅಲಂಕರಿಸಿದ್ದ ರಥಕ್ಕೆ
ಮಹಾಮಂಗಳಾರತಿ ನೆರವೇರಿಸುತ್ತಿದ್ದಂತೆ ಭಕ್ತರ ಜಯಘೋಷ ಹರ್ಷೋದ್ಘಾರದ ನಡುವೆ ರಥೋತ್ಸವ ಪ್ರಾರಂಭವಾಯಿತು.

ಸಮಾಳ, ನಂದಿಕೋಲು ಮಂಗಳ ವಾದ್ಯಗಳು ವಿಜೃಂಭಣೆಯ ರಥೋತ್ಸವಕ್ಕೆ ಮೆರಗು ತಂದಿದ್ದವು. ಗ್ರಾಮದ ಮುಖ್ಯಬೀದಿಯ ಮೂಲಕ ಪಾದಗಟ್ಟೆಯವರೆಗೆ ಸಾಗಿ ರಥ ಮೂಲಸ್ಥಳಕ್ಕೆ ಬಂದು ತಲುಪಿತು. ಭಕ್ತರು ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಎಸೆದು ಭಕ್ತಿಯಿಂದ ಕೈಮುಗಿದರು. ಹುಗಲೂರು ಸುತ್ತಮುತ್ತಲ ಗ್ರಾಮಗಳ ಜನರು ರಥೋತ್ಸವದಲ್ಲಿ ಭಾಗವಹಿಸಿದ್ದರು. ದೇವಸ್ಥಾನ ಸಮಿತಿ, ಶರಣಬಸವೇಶ್ವರ ಪುರಾಣ ಸಮಿತಿ ಪದಾಧಿಕಾರಿಗಳು, ದೈವಸ್ಥರು ಇದ್ದರು.

ADVERTISEMENT

ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಗ್ರಾಮದ ಭಕ್ತರು ದೇವಸ್ಥಾನಕ್ಕೆ ತೆರಳಿ ಹಣ್ಣುಕಾಯಿ ಅರ್ಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.