ADVERTISEMENT

ಮಲಪನಗುಡಿಯಲ್ಲಿ ಸಂಭ್ರಮದ ಜೋಡಿ ತೇರು

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2019, 13:27 IST
Last Updated 13 ಏಪ್ರಿಲ್ 2019, 13:27 IST
ಹಳೆ ಮಲಪನಗುಡಿಯಲ್ಲಿ ಶನಿವಾರ ಸಂಜೆ ನಡೆದ ಜೋಡಿ ರಥೋತ್ಸವಕ್ಕೆ ನೂರಾರು ಜನ ಸಾಕ್ಷಿಯಾದರು–ಪ್ರಜಾವಾಣಿ ಚಿತ್ರ
ಹಳೆ ಮಲಪನಗುಡಿಯಲ್ಲಿ ಶನಿವಾರ ಸಂಜೆ ನಡೆದ ಜೋಡಿ ರಥೋತ್ಸವಕ್ಕೆ ನೂರಾರು ಜನ ಸಾಕ್ಷಿಯಾದರು–ಪ್ರಜಾವಾಣಿ ಚಿತ್ರ   

ಹೊಸಪೇಟೆ: ತಾಲ್ಲೂಕಿನ ಹಳೆ ಮಲಪನಗುಡಿಯಲ್ಲಿ ಶನಿವಾರ ಸಂಜೆ ಶ್ರೀರಾಮಚಂದ್ರ ಹಾಗೂ ಮಲ್ಲಿಕಾರ್ಜುನ ಸ್ವಾಮಿ ಜೋಡಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.

ಶ್ರದ್ಧಾ, ಭಕ್ತಿಯಿಂದ ಭಕ್ತರು ತೇರು ಎಳೆದರು.ವಿವಿಧ ಕಡೆಗಳಿಂದ ಬಂದಿದ್ದ ನೂರಾರು ಜನ ಅದಕ್ಕೆ ಸಾಕ್ಷಿಯಾದರು.

ತೇರು ಎಳೆಯುವಾಗ ಭಕ್ತರು ಉತ್ತತ್ತಿ, ಹೂ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ‘ಶ್ರೀರಾಮಚಂದ್ರ, ಮಲ್ಲಿಕಾರ್ಜುನ ಸ್ವಾಮಿಗೆ ಜಯವಾಗಲಿ’ ಎಂದು ಘೋಷಣೆಗಳನ್ನು ಕೂಗಿದರು. ಈ ವೇಳೆ ಯುವಕರು ಶಿಳ್ಳೆ ಹೊಡೆದು ಸಂಭ್ರಮಿಸಿದರು. ಕೆಲವರು ಕಟ್ಟಡಗಳ ಮೇಲೆ ನಿಂತು ಛಾಯಾಚಿತ್ರ, ಸೆಲ್ಫಿ ತೆಗೆದುಕೊಂಡರು. ಅಲ್ಲಿಂದಲೇ ಕೈಮುಗಿದರು.

ADVERTISEMENT

ಕಂಪ್ಲಿ ಮುಖ್ಯರಸ್ತೆಯಲ್ಲಿಯೇ ತೇರು ಎಳೆದದ್ದರಿಂದ ಎರಡು ಗಂಟೆಗೂ ಹೆಚ್ಚು ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.