ಬಳ್ಳಾರಿ: ನಗರದ 11ನೇ ವಾರ್ಡ್ ವ್ಯಾಪ್ತಿಯ ಸಣ್ಣ ಮಾರುಕಟ್ಟೆಯ ಮರು ನಿರ್ಮಾಣ ಕಾಮಗಾರಿಯನ್ನು ಶೀಘ್ರ ಆರಂಭಿಸಲಾಗುವುದು ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಗುರುವಾರ ನಗರ ಸಂಚಾರ ನಡೆಸಿದ ಅವರು, ಮಾರುಕಟ್ಟೆ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರೊಂದಿಗೆ ಚರ್ಚಿಸಿ, ‘ಅಂದಾಜು ₹2 ಕೋಟಿ ವೆಚ್ಚದಲ್ಲಿ ಸಣ್ಣ ಮಾರುಕಟ್ಟೆಯ ಕಟ್ಟಡದ ಮರು ನಿರ್ಮಾಣವನ್ನು ಅತ್ಯಾಧುನಿಕ ಮಾದರಿಯಲ್ಲಿ ಮಾಡಲಾಗುವುದು’ ಎಂದರು.
ಇಡೀ ದಿನ 11ನೇ ವಾರ್ಡ್‌ನ ವಿವಿಧ ಪ್ರದೇಶಗಳಲ್ಲಿ ಸುತ್ತಾಡಿದ ಅವರು ಸ್ಥಳೀಯರಿಂದ ಅಹವಾಲು ಆಲಿಸಿದರು. ಮುಖ್ಯವಾಗಿ ಮೂಲಸೌಕರ್ಯಗಳಿಗೆ ಸಂಬಂಧಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳದಲ್ಲಿ ಅಧಿಕಾರಿಗಳಿಗೆ ಸೂಚನೆ ಮಾಡಿದರು.
ಪಾಲಿಕೆ ಸದಸ್ಯರಾದ ಎಂ.ಪ್ರಭಂಜನಕುಮಾರ್, ಸದಸ್ಯರಾದ ನೂರ್ ಮೊಹಮ್ಮದ್, ಕಾಂಗ್ರೆಸ್ ಮುಖಂಡರಾದ ಸುಬ್ಬರಾಯುಡು, ಹಗರಿ ಗೋವಿಂದ, ಹೊನ್ನಪ್ಪ, ಎಸ್.ವಾಸುದೇವ ರೆಡ್ಡಿ, ಚಂಪಾ ಚವ್ಹಾಣ್, ಕವಿತಾ, ಸ್ಥಳೀಯ ಮುಖಂಡರಾದ ರಾಜ, ಪೆಟ್ರೋಲ್ ವಲಿ, ಶಿವಸ್ವಾಮಿ, ಗೋಪಿ, ಮಾಸ್ ಬಸವ, ಸುಧೀರ್, ಲೋಕೇಶ್, ಕೆ.ಎಂ.ಗುರು ಸಿದ್ಧೇಶ್, ಇಸ್ಮಾಯಿಲ್, ನೂರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.