ಬಳ್ಳಾರಿ: ಬಳ್ಳಾರಿ ನಗರದ ಗಡಿಗಿ ಚೆನ್ನಪ್ಪ (ರಾಯಲ್) ವೃತ್ತದಿಂದ ರೈಲ್ವೆ ಅಂಡರ್ ಪಾಸ್ ವರೆಗಿನ ಅಭಿವೃದ್ಧಿ ಕಾಮಗಾರಿ ಆರಂಭವಾಗಿದ್ದು, ಬುಧವಾರದಿಂದ ರಸ್ತೆ ಸಂಚಾರ ಬಂದ್ ಮಾಡಲಾಗಿದೆ.
ರಾಯಲ್ ವೃತ್ತದಲ್ಲಿನ ಕಾಮಗಾರಿಯಿಂದಾಗಿ ವರ್ಷಗಳ ಕಾಲ ಸಂಚಾರ ಸಮಸ್ಯೆ ಎದುರಿಸಿದ್ದ ನಗರದ ನಾಗರಿಕರಿಗೆ ಈಗ ಮತ್ತೊಂದು ಕಾಮಗಾರಿಯಿಂದ ಸಂಚಾರ ಸಂಕಟ ಎದುರಾಗಿದೆ.
ಈ ಮಾರ್ಗದಲ್ಲಿ ಸಂಚಾರ ಆರಂಭವಾಗಲು ಕನಿಷ್ಠ 20 ದಿನಗಳಾದರೂ ಬೇಕಾಗಲಿದೆ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸದ್ಯ ಈ ಕಾಮಗಾರಿ ಕಾರಣಕ್ಕೆ ದುರ್ಗಮ್ಮನ ಗುಡಿ ಮಾರ್ಗವಾಗಿ ಗವಿಯಪ್ಪ ವೃತ್ತದ ಕಡೆಗೆ ಎರಡೂ ಕಡೆ ಸಂಚಾರ ನಿರ್ಬಂಧಗೊಂಡಿದೆ. ಅತ್ತ ದುರ್ಗಮ್ಮ ಗುಡಿಯ ಬಳಿ, ಇತ್ತ ರಾಯಲ್ ವೃತ್ತದ ಬಳಿ ಬ್ಯಾರಿಕೇಡ್ ಗಳನ್ನು ಹಾಕಲಾಗಿದೆ. ಹೀಗಾಗಿ ಸುತ್ತಮುತ್ತಲ ಪ್ರದೇಶದಲ್ಲಿ ತೀವ್ರ ಟ್ರಾಫಿಕ್ ಸಮಸ್ಯೆ ಎದುರಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.