ಕುರುಗೋಡು: ಇಲ್ಲಿನ ಕೊಟ್ಟೂರು ಸ್ವಾಮಿ ಸಂಸ್ಥಾನ ಶಾಖಾ ವಿರಕ್ತ ಮಠದ ಪೀಠಾಧಿಪತಿ ನಿರಂಜನ ಪ್ರಭು ಸ್ವಾಮೀಜಿ ಅವರು ಪವಿತ್ರ ಶ್ರಾವಣಮಾಸದ ಅಂಗಂವಾಗಿ ‘ದುಶ್ಚಟಗಳ ಭಿಕ್ಷೆ ಸದ್ಗುಣಗಳ ಧೀಕ್ಷೆ’ ಶೀರ್ಷಿಕೆಯಡಿ ಕೈಗೊಂಡ ಸದ್ಭಾವನಾ ಪಾದಯಾತ್ರೆ ಬುಧವಾರ ಪ್ರಾರಂಭಗೊಂಡಿತು.
ಪಟ್ಟಣದ ಒಳ ಮಠದ ಆವರಣದಿಂದ ಪ್ರಾರಂಭಗೊಂಡ ಪಾದಯಾತ್ರೆ ಆರು, ಏಳು ಮತ್ತು 16ನೇ ವಾರ್ಡ್‌ಗಳ ಪ್ರತಿ ಓಣಿಗಳಲ್ಲಿ ಸಂಚರಿಸಿ ನೀಲಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ಸಮಾವೇಶಗೊಂಡಿತು.
ಸುಮಂಗಳೆಯರ ಕಳಸ, ಭಜನಾತಂಡದ ಸದಸ್ಯರು ಭಾಗವಹಿಸಿ ಮೆರವಣಿಗೆಯ ಮೆರುಗು ಹೆಚ್ಚಿಸಿದರು.
ಶ್ರೀಗಳೊಂದಿಗೆ ಹೆಜ್ಜೆಹಾಕಿದ ನೂರಾರು ಭಕ್ತರು ವಿಶ್ವಗುರು ಬಸವಣ್ಣನವರ ವಚನಗಳನ್ನು ಹಾಡುತ್ತಾ ಸಾಗಿದ್ದು ವಿಶೇಷವಾಗಿತ್ತು.
ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ನಿರಂಜನ ಪ್ರಭು ಸ್ವಾಜೀಮಿ, ಶ್ರಾವಣ ಮಾಸದ ಧಾರ್ಮಿಕ ಕಾರ್ಯಕ್ರಮಗಳ ಒತ್ತಡದ ನಡುವೆ ಸದ್ಭಾವನಾ ಯಾತ್ರೆ ಮಾಡುತ್ತಿರುವುದು ಜೋಳಿಗೆಯಲ್ಲಿ ದಕ್ಷಿಣೆಹಾಕಿಸಿಕೊಳ್ಳುವುದಕ್ಕಲ್ಲ. ಭಕ್ತರ ದುಶ್ಚಟಗಳನ್ನು ಹಾಕಿಸಿಕೊಂಡು ಸದ್ಗುಣಗಳ ಧೀಕ್ಷೆ ನೀಡುಲು ಎಂದರು.
ದುಶ್ಚಟಗಳಿಂದ ಮನ-ಮನೆ ಮುಕ್ತವಾದರೆ ಮಾತ್ರ ಕುಟುಂಬಗಳ ಜತೆಗೆ ಗ್ರಾಮಗಳು ಆರೋಗ್ಯಕರವಾಗಿರಲು ಸಾಧ್ಯ. ಆರೋಗ್ಯಕರ ಸಮಾಜ ನಿರ್ಮಾಣ ಮಾಡುವ ಹಿನ್ನೆಲೆಯಲ್ಲಿ ಶ್ರೀಮಠದಿಂದ ದಿಟ್ಟ ಹೆಜ್ಜೆಹಿಡಲಾಗಿದೆ. ಭಕ್ತರು ಸಕಾರಾತ್ಮಕವಾಗಿ ಸ್ವಂದಿಸುತ್ತಿರುವುದು ಹರ್ಷತಂದಿದೆ ಎಂದರು.
ಶಾಸಕ ಜೆ.ಎನ್.ಗಣೇಶ್, ಸಿಪಿಐ. ವಿಶ್ವನಾಥ ಕೆ.ಹಿರೇಗೌಡರ್, ಪಿಎಸ್‌ಐ. ಸುಪ್ರಿತ್, ಪುರಸಭೆ ಅಧ್ಯಕ್ಷ ಟಿ.ಶೇಖಣ್ಣ, ಮುಖ್ಯಾಧಿಕಾರಿ ಹರ್ಷವರ್ಧನ, ಮುಖಂಡರಾದ ಟಿ.ಎಚ್. ಮಲ್ಲೇಶಪ್ಪ, ಮದಿರೆ ಕುಮಾರಸ್ವಾಮಿ, ಚೇಗೂರು ಷಣ್ಮುಖ, ಸಿಂದಿಗಿ ಗವಿಸಿದ್ದಪ್ಪ, ಬುಟ್ಟಾ ಮಲ್ಲಿಕಾರ್ಜುನ, ಎಸ್.ವೆಂಕಟೇಶ ಗೌಡ, ಎಸ್. ಬಶೀರ್ ಸಾಬ್, ಟಿ.ಮಂಜುನಾಥ, ಎಸ್.ನಟರಾಜ ಗೌಡ, ಕೆ.ಗಾದಿಲಿಂಗಪ್ಪ, ಭದ್ರಿಗೌಡ, ಆರು, ಏಳು ಮತ್ತು ೧೬ನೇ ವಾರ್ಡಿನ ಭಕ್ತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.