
ಹೂವಿನಹಡಗಲಿ: ತಾಲ್ಲೂಕಿನ ಹಡಗಲಿ-ಇಟ್ಟಿಗಿ ರಸ್ತೆಯಲ್ಲಿ ನಿಯಮ ಉಲ್ಲಂಘಿಸಿ ಮರಳು ಸಾಗಣೆ ಮಾಡುತ್ತಿದ್ದ ನಾಲ್ಕು ಟಿಪ್ಪರ್ ಲಾರಿಗಳನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಶುಕ್ರವಾರ ವಶಪಡಿಸಿಕೊಂಡಿದ್ದಾರೆ.
‘ಅಲಬೂರು ಸ್ಟಾಕ್ ಯಾರ್ಡ್‌ನಿಂದ ಮರಳು ಸಾಗಣೆ ಮಾಡುತ್ತಿದ್ದ ಟಿಪ್ಪರ್‌ಗಳನ್ನು ಅಧಿಕಾರಿಗಳು ತಡೆದು ಪರಿಶೀಲಿಸಿದಾಗ ಸಾಮರ್ಥ್ಯ ಮೀರಿ ಮರಳು ಸಾಗಣೆ ಮಾಡುತ್ತಿದ್ದುದು ಕಂಡು ಬಂದಿದೆ. ಹಾವೇರಿ, ಗದಗ, ಹುಬ್ಬಳ್ಳಿಗೆ ಮರಳು ಸಾಗಣೆಯ ಪರ್ಮಿಟ್ ಇರುವ ನಾಲ್ಕು ಲಾರಿಗಳನ್ನು ಜಪ್ತಿ ಮಾಡಿ ಪಟ್ಟಣ ಪೊಲೀಸ್ ಠಾಣೆ ವಶಕ್ಕೆ ಒಪ್ಪಿಸಲಾಗಿದೆ.
ಖಚಿತ ಮಾಹಿತಿ ಅಧರಿಸಿ ಪ್ರಾದೇಶಿಕ ಸಾರಿಗೆ ಅಧಿಕಾರಿ ದಾಮೋದರ ಮಾರ್ಗದರ್ಶನದಲ್ಲಿ ದಾಳಿ ನಡೆಸಲಾಗಿದೆ ಎಂದು ಮೋಟಾರು ವಾಹನ ನಿರೀಕ್ಷಕ ಮಹ್ಮದ್ ಷರೀಫ್ ಶೇಖ್ ಹೇಳಿದರು. ಸಿಬ್ಬಂದಿ ಡಿ.ಪ್ರಭು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.