ADVERTISEMENT

ಕೊಟ್ಟೂರು ಸ್ವಾಮಿ ಮಠಕ್ಕೆ ಬಂದಿದ್ದ ಸಿದ್ಧಗಂಗಾ ಶ್ರೀ

​ಪ್ರಜಾವಾಣಿ ವಾರ್ತೆ
Published 21 ಜನವರಿ 2019, 15:58 IST
Last Updated 21 ಜನವರಿ 2019, 15:58 IST
ಹೊಸಪೇಟೆಯ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದಲ್ಲಿ 1991ರಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿದ್ಧಗಂಗಾ ಶ್ರೀಗಳು (ಎಡದಿಂದ ಎರಡನೆಯವರು)
ಹೊಸಪೇಟೆಯ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದಲ್ಲಿ 1991ರಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿದ್ಧಗಂಗಾ ಶ್ರೀಗಳು (ಎಡದಿಂದ ಎರಡನೆಯವರು)   

ಹೊಸಪೇಟೆ: ಲಿಂಗೈಕ್ಯ ಸಿದ್ಧಗಂಗಾ ಶ್ರೀಗಳು ಎರಡು ಸಲ ನಗರದ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠಕ್ಕೆ ಭೇಟಿ ಕೊಟ್ಟಿದ್ದರು.

1991ರ ಇಸ್ವಿಯಲ್ಲೇ ಎರಡು ಸಲ ಭೇಟಿ ಕೊಟ್ಟಿದ್ದು ವಿಶೇಷ. ಮೊದಲ ಸಲ, ಕೊಟ್ಟೂರು ಸ್ವಾಮಿ ಮಠದಲ್ಲಿ ಹಮ್ಮಿಕೊಂಡಿದ್ದ ಹಳೆಯ ವಿದ್ಯಾರ್ಥಿಗಳ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು. ‘ಶಿಕ್ಷಣ ಪದ್ಧತಿ’ ಕುರಿತು ಚರ್ಚೆ ನಡೆದಿತ್ತು. ಹಿರಿಯ ಸಂಶೋಧಕ ಚಿದಾನಂದಮೂರ್ತಿ, ಸಂಗನಬಸವ ಸ್ವಾಮೀಜಿ, ಒಳಬಳ್ಳಾರಿಯ ಸಿದ್ಧಲಿಂಗ ಸ್ವಾಮೀಜಿ, ಜಮಖಂಡಿಯ ಓಳೆ ಮಠದ ಅಭಿನವ ಕುಮಾರ ಸ್ವಾಮೀಜಿ ಪಾಲ್ಗೊಂಡಿದ್ದರು.

‘ಸ್ವಾಮೀಜಿ 1991ರಲ್ಲಿ ಭೇಟಿ ಕೊಟ್ಟಿದ್ದರು. ಆದರೆ, ಯಾವ ತಿಂಗಳಿನಲ್ಲಿ ಎನ್ನುವುದು ನೆನಪಿಲ್ಲ. ಅವರ ಮಾತುಗಳನ್ನು ಕೇಳಲು ಅಂದೇ ಸಾಕಷ್ಟು ಜನ ಬಂದಿದ್ದರು’ ಎಂದು ನೆನಪಿಸಿಕೊಳ್ಳುತ್ತಾರೆ ಮಠದ ಸಿ.ಎಸ್‌. ಶರಣಯ್ಯ.

ADVERTISEMENT

‘ಅದೇ ವರ್ಷ ಮತ್ತೊಂದು ಸಲ ಶ್ರೀಗಳು ಮಠಕ್ಕೆ ಭೇಟಿ ಕೊಟ್ಟಿದ್ದರು. ಆದರೆ, ಅದು ಅವರ ಅಧಿಕೃತ ಭೇಟಿ ಆಗಿರಲಿಲ್ಲ. ಅನ್ಯ ಊರಿಗೆ ಹೋಗುವಾಗ ಮಾರ್ಗ ಮಧ್ಯೆ ಬಂದು, ಕೆಲಹೊತ್ತು ಕಳೆದು ಹೋಗಿದ್ದರು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.