ADVERTISEMENT

ಕುರುಗೋಡು | ಸಿದ್ದರಾಮೇಶ್ವರ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 2:44 IST
Last Updated 15 ಜನವರಿ 2026, 2:44 IST
ಕುರುಗೋಡಿನ ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಿಸಲಾಯಿತು
ಕುರುಗೋಡಿನ ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಿಸಲಾಯಿತು   

ಕುರುಗೋಡು: ಶ್ರಮಿಕ ಕುಟುಂಬದಲ್ಲಿ ಜನಿಸಿದ ಶಿವಯೋಗಿ ಸಿದ್ದರಾಮೇಶ್ವರರು ಸಮ ಸಮಾಜದ ಕನಸು ಕಂಡ ಶರಣರಲ್ಲಿ ಪ್ರಮುಖರು ಎಂದು ತಹಶೀಲ್ದಾರ್ ನರಸಪ್ಪ ತಹಶೀಲ್ದಾರ್ ಅಭಿಪ್ರಾಯಪಟ್ಟರು.

ತಹಶೀಲ್ದಾರ್ ಕಚೇರಿಯಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

‘ಕಾಯಕಯೋಗಿಗಳು ಸದಾಕಾಲ ಪೂಜಿತರಾಗಿರುತ್ತಾರೆ ಎನ್ನುವುದಕ್ಕೆ ಶಿವಯೋಗಿ ಸಿದ್ದರಾಮೇಶ್ವರರು ಉತ್ತಮ ನಿದರ್ಶನ. ಅವರ ಕಾಯಕ ತತ್ವ ಮತ್ತು ಪರೋಪಕಾರಿ ಗುಣ ಎಲ್ಲರೂ ಮೈಗೂಡಿಸಿಕೊಳ್ಳಬೇಕು’ ಎಂದರು.

ADVERTISEMENT

ಗ್ರೇಡ್-2 ತಹಶೀಲ್ದಾರ್ ಮಲ್ಲೇಶಪ್ಪ, ಉಪ ತಹಶೀಲ್ದಾರ್ ರಾಜಶೇಖರ್, ಶಿರಸ್ತೇದಾರ್ ವಿಜಯಕುಮಾರ್, ಕಂದಾಯ ನಿರೀಕ್ಷಕರಾದ ಸುರೇಶ್ ಮತ್ತುಭದ್ರಯ್ಯ, ಸಿಬ್ಬಂದಿ ಮಲ್ಲಮ್ಮ, ಲತಾ, ಸ್ವಾತಿ, ಶ್ವೇತಾ, ಸರಸ್ವತಿ, ರಾಜೇಶ್ವರಿ, ಭೋವಿ ಸಮಾಜದ ಮುಖಂಡರಾದ ಎರಿಸ್ವಾಮಿ, ನಟರಾಜ, ವೀರೇಶ್, ತಿಮ್ಮಪ್ಪ, ವಿ.ನಾಗರಾಜ, ದುರ್ಗಾಪ್ರಸಾದ್, ಗುರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.