ADVERTISEMENT

ಸಿರುಗುಪ್ಪ ತಾಲ್ಲೂಕಿನ ವಿವಿಧೆಡೆ ಮಳೆ: ತುಂಬಿ ಹರಿದ ಹಳ್ಳ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 3:19 IST
Last Updated 10 ಆಗಸ್ಟ್ 2025, 3:19 IST
ಸಿರುಗುಪ್ಪ ತಾಲ್ಲೂಕಿನ ಶಾಲಿಗನೂರು ಗ್ರಾಮದಿಂದ ಕೆ. ಬೆಳಗಲ್‌ ಸಂಪರ್ಕಿಸುವ ಕಿರು ಸೇತುವೆಯ ರಸ್ತೆ  ಮೇಲೆ ಹಳ್ಳದ ನೀರು ಹರಿಯಿತು
ಸಿರುಗುಪ್ಪ ತಾಲ್ಲೂಕಿನ ಶಾಲಿಗನೂರು ಗ್ರಾಮದಿಂದ ಕೆ. ಬೆಳಗಲ್‌ ಸಂಪರ್ಕಿಸುವ ಕಿರು ಸೇತುವೆಯ ರಸ್ತೆ  ಮೇಲೆ ಹಳ್ಳದ ನೀರು ಹರಿಯಿತು   

ಸಿರುಗುಪ್ಪ: ತಾಲ್ಲೂಕಿನ ವಿವಿಧೆಡೆ ಶನಿವಾರ ಉತ್ತಮ ಮಳೆ ಸುರಿದಿದ್ದು, 64 ಹಳೆಕೋಟೆ ಗ್ರಾಮದ ಮಾರೆಮ್ಮ ದೇವಸ್ಥಾನದ ಹಿಂದಿನ ಹಳ್ಳ ಹಾಗೂ ಶಾಲಿಗನೂರು ಗ್ರಾಮದ ಹತ್ತಿರದ ಹಳ್ಳವು ತುಂಬಿ ಕಿರು ಸೇತುವೆ ಮೇಲೆ ನೀರು ಹರಿಯಿತು.

64ಹಳೆಕೋಟೆ ಗ್ರಾಮದ 5ನೇ ವಾರ್ಡ್‌ ರಸ್ತೆ ಮೇಲೆ ನೀರು ಹರಿದಿದ್ದರಿಂದ ಸಂಚಾರ ಅಸ್ತವ್ಯಸ್ತವಾಗಿತ್ತು. ಶಾಲಿಗನೂರು ಗ್ರಾಮದಿಂದ ಕೆ. ಬೆಳಗಲ್‌ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕಿರು ಸೇತುವೆ ಮೇಲೆಯೂ ಕೆಲ ತಾಸು ಸಂಚಾರ ಸ್ಥಗಿತವಾಗಿತ್ತು. ಇದರಿಂದ ಬಂಡ್ರಾಳ, ಕೆ. ಸೂಗೂರು, ಮುದೇನೂರು, ಕೆ. ಬೆಳಗಲ್‌ ಗ್ರಾಮಕ್ಕೆ ಸಂಪರ್ಕ ಕಡಿತಗೊಂಡಿತ್ತು.

ಈ ಹಳ್ಳಕ್ಕೆ ಎತ್ತರದ ಸೇತುವೆ ನಿರ್ಮಿಸುವಂತೆ ಗುರುಸ್ವಾಮಿ, ಸೋಮಯ್ಯ, ಚೆನ್ನನಗೌಡ ಒತ್ತಾಯಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.