ADVERTISEMENT

ಬಳ್ಳಾರಿ | ಬೀದಿ ನಾಯಿಗಳ ಹಾವಳಿ: ಮೂವರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 6:34 IST
Last Updated 20 ಸೆಪ್ಟೆಂಬರ್ 2025, 6:34 IST
   

ಬಳ್ಳಾರಿ: ನಗರದ 17ನೇ ವಾರ್ಡ್‌ನ ಹನುಮಾನ್‌ ನಗರದಲ್ಲಿ ಶುಕ್ರವಾರ ಬೀದಿ ನಾಯಿಗಳು ಮೂವರ ಮೇಲೆ ದಾಳಿ ನಡೆಸಿ ಗಾಯಗೊಳಿಸಿವೆ.

ಬೀದಿಯಲ್ಲಿ ನಡೆದು ಹೋಗುವ ಚಿಕ್ಕಮಕ್ಕಳನ್ನೇ ಗುರಿಯಾಗಿಸಿ ನಾಯಿಗಳು ದಾಳಿ ನಡೆಸಿರುವುದು ಶಂಕರ್‌ ಎಂಬುವವರ ಮನೆಯ ಸಿಸಿ ಕ್ಯಾಮೆರಾದ ದೃಶ್ಯಾವಳಿಗಳಿಂದ ಗೊತ್ತಾಗಿದೆ. ವಿಷಯ ತಿಳಿಯುತ್ತಲೇ ಪಾಲಿಕೆಯ ತಂಡವೊಂದು ಸ್ಥಳಕ್ಕೆ ಆಗಮಿಸಿ ಸಮಸ್ಯಾತ್ಮಕವಾಗಿದ್ದ ನಾಯಿಗಳನ್ನು ಸೆರೆಹಿಡಿದಿದ್ದಾರೆ. 

ನಾಯಿಗಳ ಹಾವಳಿಗೆ ಆಕ್ರೋಶ ವ್ಯಕ್ತಪಡಿಸಿರುವ ಸಾರ್ವಜನಿಕರು, ಅವುಗಳನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಪಾಲಿಕೆಯನ್ನು ಆಗ್ರಹಿಸಿದರು.  

ADVERTISEMENT

ಇನ್ನು ಈ ಕುರಿತು ಪ್ರಜಾವಾಣಿಗೆ ಪ್ರತಿಕ್ರಿಯಿಸಿರುವ ಪಾಲಿಕೆ ಆಯುಕ್ತ ಮಂಜುನಾಥ್‌, ‘ನಗರದಲ್ಲಿ ಒಟ್ಟು 8 ಸಾವಿರ ನಾಯಿಗಳನ್ನು ಹಿಡಿದು ಅವುಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿ, ಲಸಿಕೆ ಹಾಕಿಸಿ ಬಿಡುವ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿದೆ. ‌ನಿತ್ಯ ಈ ಕಾರ್ಯ ನಡೆಯುತ್ತಿದೆ. ಇಂದು ನಡೆದ ಘಟನೆ ಗಂಭೀರವಾಗಿದ್ದ ಕಾರಣ ಕೂಡಲೇ ತಂಡವೊಂದನ್ನು ಸ್ಥಳಕ್ಕೆ ಕಳುಹಿಸಿ ನಿರ್ದಿಷ್ಠ ನಾಯಿಗಳನ್ನು ಹಿಡಿಸಲಾಗಿದೆ. ನಾಯಿಗಳ ನಿಯಂತ್ರಣಕ್ಕೆ ಪಾಲಿಕೆ ಶ್ರಮಿಸುತ್ತಿದೆ’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.