ADVERTISEMENT

ಸುಡುಗಾಡು ಸಿದ್ಧರ ಕುಂದುಕೊರತೆ: ಸಭೆ ಆಯೋಜಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2022, 12:51 IST
Last Updated 17 ಆಗಸ್ಟ್ 2022, 12:51 IST
ಡಾ.ಬಿ.ಆರ್.ಅಂಬೇಡ್ಕರ್ ಅಲೆಮಾರಿ ಪರಿಶಿಷ್ಟ ಜಾತಿ ಬುಡ್ಗಜಂಗಮ ಮತ್ತು ಸುಡುಗಾಡು ಸಿದ್ಧ ಸಮುದಾಯಗಳ ಜಂಟಿ ಕ್ರಿಯಾ ಸಮಿತಿ ಮುಖಂಡರು ಬುಧವಾರ ಹೊಸಪೇಟೆಯಲ್ಲಿ ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಪಿ. ಅವರಿಗೆ ಮನವಿ ಪತ್ರ ಸಲ್ಲಿಸಿದರು
ಡಾ.ಬಿ.ಆರ್.ಅಂಬೇಡ್ಕರ್ ಅಲೆಮಾರಿ ಪರಿಶಿಷ್ಟ ಜಾತಿ ಬುಡ್ಗಜಂಗಮ ಮತ್ತು ಸುಡುಗಾಡು ಸಿದ್ಧ ಸಮುದಾಯಗಳ ಜಂಟಿ ಕ್ರಿಯಾ ಸಮಿತಿ ಮುಖಂಡರು ಬುಧವಾರ ಹೊಸಪೇಟೆಯಲ್ಲಿ ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಪಿ. ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಹೊಸಪೇಟೆ (ವಿಜಯನಗರ): ಹಲವು ಯೋಜನೆಗಳಿಂದ ವಂಚಿತರಾಗುತ್ತಿರುವ ಅಲೆಮಾರಿ ಸಮುದಾಯದವರ ಕುಂದುಕೊರತೆ ಸಭೆ ಆಯೋಜಿಸಬೇಕು ಎಂದು ಡಾ.ಬಿ.ಆರ್.ಅಂಬೇಡ್ಕರ್ ಅಲೆಮಾರಿ ಪರಿಶಿಷ್ಟ ಜಾತಿ ಬುಡ್ಗಜಂಗಮ ಮತ್ತು ಸುಡುಗಾಡು ಸಿದ್ಧ ಸಮುದಾಯಗಳ ಜಂಟಿ ಕ್ರಿಯಾ ಸಮಿತಿ ಆಗ್ರಹಿಸಿದೆ.

ಈ ಸಂಬಂಧ ಬುಧವಾರ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಪಿ. ಅವರಿಗೆ ಸಮಿತಿಯ ಸದಸ್ಯರು ಮನವಿ ಪತ್ರ ಸಲ್ಲಿಸಿದರು.
ಸರ್ಕಾರದಿಂದ ಒದಗಿಸಲಾಗುವ ಜಾತಿ ಪ್ರಮಾಣ ಪತ್ರ, ನಿವೇಶನ ಸೇರಿದಂತೆ ವಿವಿಧ ಮೂಲಕ ಸೌಕರ್ಯ ಒದಗಿಸುವ ಕುರಿತು ಸಮುದಾಯದ ಜನರ ಜೊತೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಮತ್ತು ತಾಲ್ಲೂಕು ಸಂಯೋಜನಾಧಿಕಾರಿಗಳ ಕುಂದುಕೊರತೆ ಸಭೆ ನಡೆಸಲು ಆದೇಶ ನೀಡಬೇಕು ಎಂದು ಒತ್ತಾಯಿಸಿದರು.

ಸಮಿತಿಯ ಜಿಲ್ಲಾಧ್ಯಕ್ಷ ವಿ‌.ಸಣ್ಣ ಅಜ್ಜಯ್ಯ, ಪ್ರಧಾನ ಕಾರ್ಯದರ್ಶಿ ಕಿನ್ನರಿ ಶೇಖಪ್ಪ, ಉಪಾಧ್ಯಕ್ಷ ಚೌಡಪ್ಪ ಎಸ್.ಕೆ. ಹಾಗೂ ಖಜಾಂಚಿ ಯಲ್ಲಪ್ಪ ಕರಿ ಇದ್ದರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.