ಹರಪನಹಳ್ಳಿ: ‘ಮೌಢ್ಯ ನಿವಾರಣೆಗೆ ಶ್ರಮಿಸಿದ ಕೆಲವೇ ಮಠಗಳಲ್ಲಿ ಸಿರಿಗೆರೆ ತರಳಬಾಳು ಮಠ ಪ್ರಮುಖವಾದದ್ದು’ ಎಂದು ಎಚ್‍ಪಿಎಸ್ ಪಿಯು ಕಾಲೇಜಿನ ಸಲಹಾ ಸಮಿತಿ ಅಧ್ಯಕ್ಷ ಪಿ.ಮಹಾಬಲೇಶ್ವರ ಗೌಡ್ರು ತಿಳಿಸಿದರು.
ಪಟ್ಟಣದ ಎಚ್‍ಪಿಎಸ್ ಪಿಯು ಕಾಲೇಜು ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತರಳಬಾಳು ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ 32ನೇ ವರ್ಷದ ಪುಣ್ಯಸ್ಮರಣೆ, ಕಾಲೇಜಿನ 2024-25ನೇ ಸಾಲಿನ ಪಠ್ಯಪೂರಕ ಚಟುವಟಿಕೆಗಳು, ರಾಷ್ಟ್ರೀಯ ಸೇವಾ ಯೋಜನೆ ಘಟಕದ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಸಿರಿಗೆರೆ ತರಳಬಾಳು ಮಠ ಸಮಾಜಮುಖಿ ಕಾರ್ಯಗಳು, ವೈಚಾರಿಕತೆ ಪ್ರಚುರಪಡಿಸುವಲ್ಲಿ ಮುಂಚೂಣಿಯಲ್ಲಿದೆ. ಇದಕ್ಕೆ ಭದ್ರ ಬುನಾದಿ ಹಾಕಿದ ಕೀರ್ತಿ ಶಿವಕುಮಾರ ಶಿವಾಚಾರ್ಯರಿಗೆ ಸಲ್ಲುತ್ತದೆ’ ಎಂದರು.
‘ಶ್ರೀಗಳು ಆರಂಭಿಸಿದ ಶೈಕ್ಷಣಿಕ ಸಂಸ್ಥೆಗಳಲ್ಲಿ ಉಚಿತವಾಗಿ ವಿದ್ಯಾರ್ಥಿ ನಿಲಯದ ಸೌಲಭ್ಯ ಕಲ್ಪಿಸಿ, ಸಹಪಂಕ್ತಿ ಭೋಜನೆ ಆರಂಭಿಸಿದರು. ಅಸ್ಪೃಶ್ಯತೆ ನಿವಾರಣೆಗೆ ಒತ್ತು ನೀಡಿ, ಸಮಾನತೆ ಸಾರಿದರು’ ಎಂದು ತಿಳಿಸಿದರು.
ನೃತ್ಯ, ಕಿರುನಾಟಕ, ಅಭಿನಯ, ರಸಪ್ರಶ್ನೆ, ಸುಂದರ ಬರವಣಿಗೆ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಪ್ರಭುಲಿಂಗಪ್ಪ ಸಿ.ಹಲಗೇರೆ ಉಪನ್ಯಾಸ ನೀಡಿದರು. ಸಾಧು ಲಿಂಗಾಯತ ಸಮಾಜದ ಅಧ್ಯಕ್ಷ ಗುಂಡಗತ್ತಿ ಮಂಜುನಾಥ ಉದ್ಘಾಟಿಸಿದರು. ವಲಯ ಅಧಿಕಾರಿ ಸಿ.ಎಸ್.ಬಸವರಾಜ್, ಸಿದ್ದಪ್ಪ, ಪ್ರಾಚಾರ್ಯ ಮಂಜುನಾಥ ಸಿ. ಬೆನಕನಕೊಂಡ, ಕೆ.ಜಿ.ಶಿವಯೋಗಿ, ಬಿ.ರೇವಣಗೌಡ್ರು, ಮುತ್ತೇಶ್, ಉದಯಕುಮಾರ್, ಮಂಜುನಾಥ್, ಸಿ.ಎಸ್.ಬಸವರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.