ADVERTISEMENT

ಸೇತುವೆ ಮೇಲೆ ನೀರು: ಸಂಚಾರ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 7:18 IST
Last Updated 26 ಅಕ್ಟೋಬರ್ 2025, 7:18 IST
ತೆಕ್ಕಲಕೋಟೆ ಸಮೀಪದ ಎಚ್.ಹೊಸಳ್ಳಿ ಗ್ರಾಮದ ಹಿರೇಹಳ್ಳದ ಸೇತುವೆ ಮೇಲೆ ನೀರು ಹರಿಯುತ್ತಿದ್ದು ಸಂಚಾರಕ್ಕೆ ಅಡಚಣೆಯಾಗಿದೆ
ತೆಕ್ಕಲಕೋಟೆ ಸಮೀಪದ ಎಚ್.ಹೊಸಳ್ಳಿ ಗ್ರಾಮದ ಹಿರೇಹಳ್ಳದ ಸೇತುವೆ ಮೇಲೆ ನೀರು ಹರಿಯುತ್ತಿದ್ದು ಸಂಚಾರಕ್ಕೆ ಅಡಚಣೆಯಾಗಿದೆ   

ತೆಕ್ಕಲಕೋಟೆ: ಸಮೀಪದ ಎಚ್.ಹೊಸಳ್ಳಿ ಗ್ರಾಮದ ಹಿರೇಹಳ್ಳದ ಸೇತುವೆ ಮೇಲೆ ಶನಿವಾರವೂ ಮಳೆ ನೀರು ಹರಿಯುತ್ತಿದ್ದು, ಬಸ್ ಮತ್ತು ಲಾರಿಗಳ ಓಡಾಟ ಸಂಪೂರ್ಣ ಸ್ಥಗಿತಗೊಂಡಿದೆ.

ಹಿರೇಹಳ್ಳದ ಮೇಲ್ಭಾಗದಲ್ಲಿ ಶುಕ್ರವಾರ ಮತ್ತು ಶನಿವಾರ ಉತ್ತಮವಾದ ಮಳೆಯಾಗಿದ್ದು ವಾಹನಗಳ ಮತ್ತು ಜನರ ಓಡಾಟಕ್ಕೆ ತೊಂದರೆಯಾಗಿದೆ. ಇದರಿಂದ ಎಚ್ ಹೊಸಳ್ಳಿ ಗ್ರಾಮದ ಬಹುತೇಕ ರೈತರ ಜಮೀನುಗಳು ಹಳ್ಳದ ಸೇತುವೆಯ ಬಲಭಾಗದಲ್ಲಿದ್ದು ರೈತರು, ಕೂಲಿ ಕಾರ್ಮಿಕರು ಜಮೀನುಗಳಿಗೆ ತೆರಳಲು ಅನಾನುಕೂಲ ಆಗಿದೆ.

ಈ ಸೇತುವೆಯ ಮೇಲೆ ವಿವಿಧ ಗ್ರಾಮಗಳಿಗೆ ಸಂಚರಿಸುತ್ತಿದ್ದ ವಾಹನಗಳು ಪರ್ಯಾಯ ಮಾರ್ಗದಲ್ಲಿ ಸಂಚರಿಸಿದವು. ಸೇತುವೆ ಮೇಲೆ ಸಂಚಾರ ನಿರ್ಬಂಧಿಸಿ ತಾಲ್ಲೂಕು ಆಡಳಿತ ಸೂಕ್ತ ಬಂದೋಬಸ್ತ್ ಒದಗಿಸಿತ್ತು.


ADVERTISEMENT