ADVERTISEMENT

ಭರ್ತಿಯಾದ ನಾರಿಹಳ್ಳ ಜಲಾಶಯ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2020, 2:32 IST
Last Updated 12 ಸೆಪ್ಟೆಂಬರ್ 2020, 2:32 IST
ಸಂಡೂರು ತಾಲ್ಲೂಕಿನ ತಾರಾನಗರದ ಬಳಿಯ ನಾರಿಹಳ್ಳ ಜಲಾಶಯವು ಭರ್ತಿಯಾದ ಹಿನ್ನೆಲೆಯಲ್ಲಿ ಶುಕ್ರವಾರ ಜಲಾಶಯದ ಮಧ್ಯದ ಗೇಟಿನ ಮೂಲಕ ಸ್ವಲ್ಪ ಪ್ರಮಾಣ ನೀರನ್ನು ಹೊರ ಬಿಡಲಾಯಿತು.
ಸಂಡೂರು ತಾಲ್ಲೂಕಿನ ತಾರಾನಗರದ ಬಳಿಯ ನಾರಿಹಳ್ಳ ಜಲಾಶಯವು ಭರ್ತಿಯಾದ ಹಿನ್ನೆಲೆಯಲ್ಲಿ ಶುಕ್ರವಾರ ಜಲಾಶಯದ ಮಧ್ಯದ ಗೇಟಿನ ಮೂಲಕ ಸ್ವಲ್ಪ ಪ್ರಮಾಣ ನೀರನ್ನು ಹೊರ ಬಿಡಲಾಯಿತು.   

ಸಂಡೂರು: ತಾಲ್ಲೂಕಿನ ತಾರಾನ ಗರದ ಬಳಿಯಲ್ಲಿ ನಾರಿಹಳ್ಳಕ್ಕೆ ನಿರ್ಮಿಸ ಲಾಗಿರುವ ಜಲಾಶಯವು ಶುಕ್ರವಾರ ಭರ್ತಿಯಾಗಿದೆ.

ಜಲಾಶಯದ ಒಟ್ಟು ನೀರು ಸಂಗ್ರಹ ಸಾಮರ್ಥ್ಯ 0.81 ಟಿ.ಎಂ.ಸಿ ಅಡಿ. ‘ಜಲಾಶಯ ಭರ್ತಿಯಾದ ಕಾರಣ ಶುಕ್ರವಾರ ಜಲಾಶಯದ ಒಂದು ಗೇಟಿನ ಮೂಲಕ ನೀರನ್ನು ಹೊರಬಿಡಲಾಯಿತು. ಜಲಾಶಯದ ಒಳಹರಿವು ನೋಡಿಕೊಂಡು ನೀರು ಹರಿಸುವಿಕೆ ತೀರ್ಮಾನಿಸಲಾಗುವುದು’ ಎಂದು ನಾರಿಹಳ್ಳ ಜಲಾಶಯದ ಸಹಾಯಕ ಎಂಜಿನಿಯರ್ ಪಿ.ವಿ.ಕೃಷ್ಣ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಲ್ಲೂಕಿನಲ್ಲಿ ವಾಡಿಕೆಗಿಂತ ಶೇ 14ರಷ್ಟು ಹೆಚ್ಚು ಮಳೆಯಾಗಿದ್ದು, ದಶಕದ ನಂತರ ನಾರಿಹಳ್ಳ ಜಲಾಶಯವು ಭರ್ತಿಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.